ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದ್ದು ಓರ್ವನನ್ನು ಹತ್ಯೆ ಮಾಡಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ರಫೀಕ್ ಕಳಸಗೇರಿ(50) ಅವರನ್ನು ಕೊಲೆ ಮಾಡಲಾಗಿದೆ.
ಗಲಾಟೆಯ ವೇಳೆ ಒಂದೇ ಏಟಿಗೆ ರಫೀಕ್ ಕಳಸಗೇರಿ ಮೃತಪಟ್ಟಿದ್ದಾರೆ. ಮುಸ್ತಾಕ್ ಮುಲ್ಲಾ ಜೊತೆ ಜಗಳದ ವೇಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

