HomeIndiaಬೆಂಗಳೂರಿಗೆ 3 ಅಮೃತ್ ಭಾರತ್ ರೈಲು, ವೇಳಾಪಟ್ಟಿ

ಬೆಂಗಳೂರಿಗೆ 3 ಅಮೃತ್ ಭಾರತ್ ರೈಲು, ವೇಳಾಪಟ್ಟಿ

ಕೇಂದ್ರ ಸರ್ಕಾರ ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ ನೀಡಿದೆ. ಪಶ್ಚಿಮ ಬಂಗಾಳ-ಬೆಂಗಳೂರು ನಗರ ಸಂಪರ್ಕಿಸುವ 3  ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸಲಾಗುತ್ತಿದೆ. ಇದರಿಂದಾಗಿ ಬೆಂಗಳೂರು ಮತ್ತು ಭಾರತದ ಪೂರ್ವ ಭಾಗದ ನಡುವಿನ ಪ್ರಯಾಣ ಸುಲಭವಾಗಲಿದೆ.

ಈ ಹೊಸ ರೈಲುಗಳ ಬಗ್ಗೆ ತುಮಕೂರು ಸಂಸದ, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಿಂದ ಭಾರತದ ಪೂರ್ವ ಭಾಗಕ್ಕೆ ರೈಲ್ವೆ ಸಂಪರ್ಕ ಹೆಚ್ಚಳ ಎಂದು ಹೇಳಿದ್ದಾರೆ.

ಸಚಿವರು ತಮ್ಮ ಪೋಸ್ಟ್‌ನಲ್ಲಿ, ‘ಬೆಂಗಳೂರಿನಿಂದ ಭಾರತದ ಪೂರ್ವ ಭಾಗಕ್ಕೆ ರೈಲ್ವೆ ಸಂಪರ್ಕ ಹೆಚ್ಚಿಸಲಾಗಿದ್ದು, ಪಶ್ಚಿಮ ಬಂಗಾಳದ ಬಾಲೂರ್‌ಘಾಟ್ ಮತ್ತು ರಾಧಿಕಾಪುರವನ್ನು ಸಂಪರ್ಕಿಸುವ ಎರಡು ಎಕ್ಸ್‌ಪ್ರೆಸ್ ರೈಲುಗಳ ಜೊತೆಗೆ ಬೆಂಗಳೂರಿನಿಂದ ಅಲಿಪುರ್ ದುವಾರ್‌ಗೆ ಒಂದು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅನ್ನು ಆರಂಭಿಸಲಾಗುತ್ತದೆ’ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಈ ರೈಲುಗಳು ಕರ್ನಾಟಕದೊಂದಿಗೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲಿವೆ’ ಎಂದು ಸಚಿವರು ಹೇಳಿದ್ದು, ರೈಲುಗಳು ಯಾವಾಗ ಸಂಚಾರ ನಡೆಸಲಿವೆ? ಎಂಬ ಮಾಹಿತಿ ನೀಡಿದ್ದಾರೆ.

ಈ ರೈಲುಗಳು ಪ್ರತಿದಿನ ಸಂಚಾರ ನಡೆಸುವುದಿಲ್ಲ. ಬೆಂಗಳೂರು ನಗರದ ಬೈಯಪ್ಪನಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌ಎಂವಿಟಿ) ಮತ್ತು ಪಶ್ಚಿಮ ಬಂಗಾಳದ ವಿವಿಧ ನಗರಗಳ ನಡುವೆ ರೈಲುಗಳು ಓಡಲಿದೆ.

ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಿಂದ ತೆಲಂಗಾಣ, ಆಂಧ್ರ ಪ್ರದೇಶ, ಒಡಿಶಾ ಮತ್ತು ಬೆಂಗಳೂರು ನಗರದ ನಡುವಿನ ರೈಲು ಸಂಚಾರ ಇನ್ನಷ್ಟು ಸುಲಭವಾಗಲಿದ್ದು, ಸಾವಿರಾರು ಜನರಿಗೆ ಅನುಕೂಲವಾಗಲಿದೆ.

ರೈಲುಗಳ ಸಂಚಾರದ ಮಾಹಿತಿ

  • ಎಸ್‌ಎಂವಿಟಿ ಬೆಂಗಳೂರು-ರಾಧಿಕಾಪುರ್ ಎಕ್ಸ್‌ಪ್ರೆಸ್ ರೈಲು (16223/16224). ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಪ್ರತಿ ಗುರುವಾರ ಬೆಂಗಳೂರು ನಗರದಿಂದ ಹೊರಡಲಿದೆ.
  • ಎಸ್‌ಎಂವಿಟಿ ಬೆಂಗಳೂರು-ಬಾಲೂರ್‌ ಘಾಟ್‌ ಎಕ್ಸ್‌ಪ್ರೆಸ್ ರೈಲು (16523/16524). ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಪ್ರತಿ ಬುಧವಾರ ಬೆಂಗಳೂರು ನಗರದಿಂದ ಹೊರಡಲಿದೆ.
  • ಎಸ್‌ಎಂವಿಟಿ ಬೆಂಗಳೂರು-ಅಲಿಪುರ್ ದುವಾರ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು (16597/ 16598). ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಪ್ರತಿ ಶನಿವಾರ ಬೆಂಗಳೂರು ನಗರದಿಂದ ಹೊರಡಲಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ಇದೆ. ಆದ ಕಾರಣ ಕೇಂದ್ರ ಸರ್ಕಾರ ಹೊಸ ರೈಲುಗಳನ್ನು ಘೋಷಣೆ ಮಾಡುವ ಮೂಲಕ ರಾಜ್ಯಕ್ಕೆ ಬಂಪರ್ ಕೊಡುಗೆಯನ್ನು ನೀಡಿದೆ.

ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆ ಬಲ 294. ರಾಜ್ಯದಲ್ಲಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 148. 2021ರ ಚುನಾವಣೆಯಲ್ಲಿ ಬಿಜೆಪಿ 77 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು ಮತ್ತು 60 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಪೈಪೋಟಿ ಇದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular