ಬೆಂಗಳೂರು : ಭಾರಿ ಚಳಿಗೆ ಬೆಂಗಳೂರಲ್ಲಿ ನೆಗಡಿ-ಜ್ವರ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದು ಹೆಚ್ 3 ಎನ್ 2 ರೂಪಾಂತರಿ ಲಕ್ಷಣ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಚಳಿ ಮತ್ತೆ ಹೆಚ್ಚಳವಾಗಿದೆ. ಇದರಿಂದ ಮಕ್ಕಳಿಂದ ಹಿಡಿದು ವಯೋವೃದ್ದರ ತನಕ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಇದು ಹೆಚ್ 3 ಎನ್ 2 ರೂಪಾಂತರಿ ಲಕ್ಷಣವಾಗಿದೆ. ಇದರಿಂದ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಕೆಮ್ಮು, ಜ್ವರ, ಶೀತ ಜನರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಮಕ್ಕಳಲ್ಲಿ ಹೆಚ್ಚಾಗಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ . ಮಕ್ಕಳು, ಗರ್ಭಿಣಿಯರು., ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಜ್ವರ ಬಂದಾಗ ನಿರ್ಲಕ್ಷ್ಯ ಮಾಡಬೇಡಿ, ಕೂಡಲೇ ಚಿಕಿತ್ಸೆ ತೆಗೆದುಕೊಳ್ಳಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಮಾಸ್ಕ್ ಧರಿಸಿ ಬಿಸಿ ನೀರು ಕುಡಿಯುವಂತೆ ಸಲಹೆ
ಜ್ವರ, ಶೀತ ಇದ್ದವರು ಸೀನಿದ ಕೂಡಲೇ ಸಮೀಪದವರಿಗೆ ಹರಡುತ್ತಿದೆ. ಆದ್ದರಿಂದ ಎನ್-95 ಮಾಸ್ಕ್ ಧರಿಸಿ. ಆಗಾಗ ಕೈ ತೊಳೆದುಕೊಳ್ಳಿ.. ಬೀಸಿ ನೀರು ಕುಡಿಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
H3N2 (ಹೆಚ್3ಎನ್2)
H3N2 (ಹೆಚ್3ಎನ್2) ಎಂದರೆ ಇನ್ಫ್ಲುಯೆಂಜಾ ಎ (Influenza A) ವೈರಸ್ನ ಒಂದು ಪ್ರಕಾರವಾಗಿದ್ದು, ಇದು ಶ್ವಾಸಕೋಶದ ಸೋಂಕನ್ನು ಉಂಟುಮಾಡುವ ಒಂದು ಸೀಸನಲ್ ಜ್ವರ ವೈರಸ್ ಆಗಿದೆ, ಇದು ಜ್ವರ, ಕೆಮ್ಮು, ಗಂಟಲು ನೋವು, ಮತ್ತು ದೇಹದ ನೋವಿನಂತಹ ಲಕ್ಷಣಗಳನ್ನು ತೋರಿಸುತ್ತದೆ ಮತ್ತು ಚಿಕ್ಕ ಮಕ್ಕಳು ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆ ಇರುವವರಲ್ಲಿ ಗಂಭೀರ ಪರಿಣಾಮ ಬೀರಬಹುದು. ಇದು ವೇಗವಾಗಿ ಹರಡುತ್ತದೆ ಮತ್ತು ಪ್ರತಿ ವರ್ಷ ಜ್ವರದ ಋತುವಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ರೋಗಲಕ್ಷಣಗಳು: ಜ್ವರ, ಕೆಮ್ಮು, ಗಂಟಲು ನೋವು, ದೇಹದ ನೋವು, ಆಯಾಸ ಮತ್ತು ಕೆಲವೊಮ್ಮೆ ತಲೆನೋವು.

