HomeLatest NewsSHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ಸಂಪ್'ಗೆ ತಳ್ಳಿ ಕೊಂದು ತಾಯಿ...

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ಸಂಪ್’ಗೆ ತಳ್ಳಿ ಕೊಂದು ತಾಯಿ ಆತ್ಮಹತ್ಯೆ.!

ತುಮಕೂರು : ಇಬ್ಬರು ಮಕ್ಕಳನ್ನು ಸಂಪ್ ಗೆ ತಳ್ಳಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.
ಮೃತರನ್ನು ವಿಜಯಲಕ್ಷ್ಮಿ (26) 5 ವರ್ಷದ ಅವಳಿ ಮಕ್ಕಳಾದ ಚೇತನ ಮತ್ತು ಚೈತನ್ಯ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ.

ಇಬ್ಬರು ಅವಳಿ ಮಕ್ಕಳನ್ನು ಸಂಪ್ ಗೆ ತಳ್ಳಿ ಬಳಿಕ ತಾನೂ ಬಿದ್ದು ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ತುಮಕೂರಿನ ಕ್ಯಾತಸಂದ್ರದ ಬಳಿ ಇರುವ ಸಿಂಗೋನಹಳ್ಳಿ ಗ್ರಾಮದಲ್ಲಿ ಕುಟುಂಬ ನೆಲೆಸಿತ್ತು. ಗಂಡ-ಹೆಂಡ್ತಿ ಇಬ್ಬರು ಕೂಡ ಒಟ್ಟಿಗೆ ಜೀವನ ಮಾಡುತ್ತಿದ್ದರು. ಇಬ್ಬರು ಮಕ್ಕಳನ್ನು ನೀರಿನ ಸಂಪ್ ಗೆ ತಳ್ಳಿ ತಾನೂ ಜಿಗಿದು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್’ನೋಟ್ ನಲ್ಲಿ ಏನಿತ್ತು.?
‘ಡೆತ್ ನೋಟ್ ನಲ್ಲಿ ನಮ್ಮ ಸಾವಿಗೆ ನಾವೇ ಕಾರಣ ಎಂದು ಬರೆಯಲಾಗಿದೆ. ಜೀವನದಲ್ಲಿ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ . ಗಂಡನನ್ನ ಚೆನ್ನಾಗಿ ನೋಡಿಕೊಳ್ಳಿ’ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular