HomeLatest Newsಬೆಂಗಳೂರಿನ ಬೀದಿಗಳಲ್ಲಿ ಸದ್ದು ಮಾಡ್ತಿರೋ ಈ ದೊಡ್ಡ ಕಣ್ಣಿನ ಮಹಿಳೆ ಯಾರು? ಅಸಲಿ ಗುಟ್ಟು ಪತ್ತೆ...

ಬೆಂಗಳೂರಿನ ಬೀದಿಗಳಲ್ಲಿ ಸದ್ದು ಮಾಡ್ತಿರೋ ಈ ದೊಡ್ಡ ಕಣ್ಣಿನ ಮಹಿಳೆ ಯಾರು? ಅಸಲಿ ಗುಟ್ಟು ಪತ್ತೆ ಹಚ್ಚಿದ ನೆಟ್ಟಿಗರು

ಬೆಂಗಳೂರು:ಕಟ್ಟಡಗಳ ಮುಂದೆ, ರಸ್ತೆ, ತೋಟ, ಅಥವಾ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಓಡಾಡುವಾಗ ಒಂದು ದೃಶ್ಯ ನಿಮ್ಮನ್ನು ಅಚ್ಚರಿಗೊಳಿಸಿರಬಹುದು. ನಿರ್ಮಾಣ ಹಂತದ ಕಟ್ಟಡಗಳು, ಹಣ್ಣು-ತರಕಾರಿ ಅಂಗಡಿಗಳು, ಅಷ್ಟೇ ಏಕೆ ಗದ್ದೆ-ತೋಟಗಳ ಮುಂದೆ ದೊಡ್ಡ ಕಣ್ಣು ಬಿಟ್ಟಿರುವ ಒಬ್ಬ ದಪ್ಪ ಮಹಿಳೆಯ ಫೋಟೋ ರಾರಾಜಿಸುತ್ತಿದೆ. ಎಂತವರನ್ನೂ ಒಂದು ಕ್ಷಣ ಬೆಚ್ಚಿಬೀಳಿಸುವ ಈ ಫೋಟೋ ಈಗ ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.ದೊಡ್ಡ ಕಣ್ಣಿನ ದಪ್ಪ ಮಹಿಳೆಯ ಫೋಟೋ ಈಗ ಯಾವ ಸೆಲೆಬ್ರಿಟಿಯ ಫೋಟೋಗೂ ಕಡಿಮೆಯಿಲ್ಲದಂತೆ ಎಲ್ಲ ಕಡೆ ಕಂಡುಬರುತ್ತಿದೆ.

ದೃಷ್ಟಿ ಗೊಂಬೆಯ ಜಾಗಕ್ಕೆ ಬಂದ ರಿಯಲ್ ಫೋಟೋ

ಸಾಮಾನ್ಯವಾಗಿ ಮನೆ ಅಥವಾ ಅಂಗಡಿಗಳಿಗೆ ಕೆಟ್ಟ ದೃಷ್ಟಿ ಬೀಳಬಾರದು ಎಂದು ಜನರು ದೃಷ್ಟಿ ಗೊಂಬೆಗಳನ್ನು ನೇತುಹಾಕುವುದು ವಾಡಿಕೆ. ಆದರೆ ಈಗ ಟ್ರೆಂಡ್ ಬದಲಾಗಿದೆ. ಈ ‘ಮಿಸ್ಟರಿ’ ಮಹಿಳೆ ಯಾರು ಎಂಬ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಎಕ್ಸ್‌ (X) ಬಳಕೆದಾರರು ಮತ್ತು AI ತಂತ್ರಜ್ಞಾನದ ನೆರವಿನಿಂದ ಈಕೆಯ ಹಿನ್ನೆಲೆ ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕದಾದ್ಯಂತ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮತ್ತು ತರಕಾರಿ ಅಂಗಡಿಗಳಲ್ಲಿ ಕೋವಿಡ್ ನಂತರ ಸದ್ದು ಮಾಡುತ್ತಿರುವ ಈ ಫೋಟೋ ಹಿಂದಿರುವವರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ನೆಟ್ಟಿಗರೊಬ್ಬರು ಗೂಗಲ್ ಲೆನ್ಸ್ ಮೂಲಕ ಹುಡುಕಿದರೂ ಸಿಗದ ಈ ಮಾಹಿತಿಯನ್ನು ಕೊನೆಗೆ ‘ಎಕ್ಸ್’ (X) ಬಳಕೆದಾರರೇ ಪತ್ತೆ ಹಚ್ಚಿದ್ದಾರೆ.

2026ರ ಜನವರಿ 5 ರಂದು ಈ ರಹಸ್ಯ ಬಯಲಾಗಿದೆ.ಈಕೆಯ ಹೆಸರು ನಿಹಾರಿಕಾ ಇವರು ಕರ್ನಾಟಕದ ಮೂಲದ ಒಬ್ಬ ಜನಪ್ರಿಯ ಯೂಟ್ಯೂಬರ್.ಈಕೆಯ ಮುಖಭಾವ ವಿಚಿತ್ರವಾಗಿರುವುದರಿಂದ, ಕೆಟ್ಟ ದೃಷ್ಟಿ ತಡೆಯಲು 2023ರಿಂದ ಇವರ ಫೋಟೋವನ್ನು ‘ದೃಷ್ಟಿ ಗೊಂಬೆ’ಯಾಗಿ ಬಳಸಲಾಗುತ್ತಿದೆ.

ಯೂಟ್ಯೂಬರ್ ನಿಹಾರಿಕಾ ಅವರ ಈ ಫೋಟೋ ಈಗ ಕೇವಲ ಮೊಬೈಲ್ ಸ್ಕ್ರೀನ್‌ಗೆ ಸೀಮಿತವಾಗಿಲ್ಲ. ತರಕಾರಿ ಅಂಗಡಿಗಳಿಂದ ಹಿಡಿದು ಬೃಹತ್ ಕಟ್ಟಡಗಳವರೆಗೆ ಈ ಫೋಟೋವನ್ನು ಜನರು ನಂಬಿಕೆಯಿಂದ ಹಚ್ಚುತ್ತಿದ್ದಾರೆ. ಗಣೇಶ್ ಎಂಬುವವರು ಎಕ್ಸ್‌ನಲ್ಲಿ ಮಾಹಿತಿ ನೀಡಿ, ಕೆಟ್ಟ ದೃಷ್ಟಿ ಬೀಳದಂತೆ ತಡೆಯಲು ಈಕೆಯ ಫೋಟೋವನ್ನು ಪ್ರಮುಖವಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಈಗಾಗಲೇ 3.2 ಮಿಲಿಯನ್‌ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಕೆಲವರು ಇದನ್ನು ‘ನಜರ್ ಬಟ್ಟು’ ಎಂದರೆ, ಮತ್ತೆ ಕೆಲವರು ಇದು “ಕಳ್ಳರನ್ನು ಹೆದರಿಸುವ ತಂತ್ರ” ಎಂದು ತಮಾಷೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ, ಕೋವಿಡ್ ನಂತರ ಈ ಫೋಟೋ ಬೆಂಗಳೂರು ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲೂ ಟ್ರೆಂಡ್ ಆಗಿದ್ದು, ದೃಷ್ಟಿ ಗೊಂಬೆಯ ಜಾಗವನ್ನು ಈ ಯೂಟ್ಯೂಬರ್ ಆಕ್ರಮಿಸಿಕೊಂಡಿರುವುದು ಮಾತ್ರ ವಿಚಿತ್ರ ಸತ್ಯ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular