HomeLatest NewsBREAKING: 'ಡಿ. 25 ರಂದು ಜಗತ್ತು ಕೊನೆಗೊಳ್ಳುತ್ತೆ' ಸುಳ್ಳು ಭವಿಷ್ಯ ನುಡಿದಿದ್ದ ನಕಲಿ ದೇವಮಾನವ ಎಬೋ...

BREAKING: ‘ಡಿ. 25 ರಂದು ಜಗತ್ತು ಕೊನೆಗೊಳ್ಳುತ್ತೆ’ ಸುಳ್ಳು ಭವಿಷ್ಯ ನುಡಿದಿದ್ದ ನಕಲಿ ದೇವಮಾನವ ಎಬೋ ನೋಹ್ ಅರೆಸ್ಟ್

ಅಕ್ರಾ(ಘಾನಾ): 2025ರ ಡಿಸೆಂಬರ್ 25 ರಂದು ಜಗತ್ತು ಕೊನೆಯಾಗಲಿದೆ ಎಂದು ಸ್ಥಳೀಯರಲ್ಲಿ ಭೀತಿ ಮೂಡಿಸಿದ ಜಾಗತಿಕ ಪ್ರವಾಹದ ಮುನ್ಸೂಚನೆ ನೀಡಿದ್ದಕ್ಕಾಗಿ ಸ್ವಯಂ ಘೋಷಿತ ಘಾನಾದ ಪ್ರವಾದಿ ಎಬೋ ನೋಹ್ ಅವರನ್ನು ಘಾನಾ ಪೊಲೀಸರು ಬಂಧಿಸಿದ್ದಾರೆ.

ನೋಹ್ ಅವರನ್ನು ಘಾನಾ ಪೊಲೀಸ್ ಸೇವೆಯ ವಿಶೇಷ ಸೈಬರ್ ಪರಿಶೀಲನಾ ತಂಡ ಬುಧವಾರ(ಸ್ಥಳೀಯ ಸಮಯ) ಬಂಧಿಸಿದೆ. ಕೈಕೋಳದೊಂದಿಗೆ ಪೊಲೀಸ್ ಕಸ್ಟಡಿಯಲ್ಲಿರುವ ಸ್ವಯಂ ಘೋಷಿತ ಪ್ರವಾದಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗಿತ್ತು. ಆಧುನಿಕ ನೋಹ್‌ ತನ್ನನ್ನು ದೇವರು ಕಳುಹಿಸಿದ ಪ್ರವಾದಿ ಎಂದು ಹೇಳಿಕೊಂಡಿದ್ದ. ಡಿಸೆಂಬರ್ 25 ರಂದು ಜಗತ್ತು ಕೊನೆಗೊಳ್ಳುತ್ತದೆ ಎಂದು ಭವಿಷ್ಯ ಹೇಳಿದ್ದ.

ಡಿಸೆಂಬರ್ 25, 2025 ರಂದು ಜಗತ್ತು ಕೊನೆಗೊಳ್ಳುತ್ತದೆ ಎಂದು ದೇವರು ತನಗೆ ಎಚ್ಚರಿಸಿದ್ದಾನೆ. ಭಾರೀ ಮಳೆ ಮತ್ತು ಪ್ರವಾಹದಿಂದ ವಿನಾಶ ಉಂಟಾಗುತ್ತದೆ. ಜನರನ್ನು ರಕ್ಷಿಸಲು ದೇವರು ದೋಣಿಗಳನ್ನು ನಿರ್ಮಿಸಲು ಸೂಚಿಸಿದ್ದಾನೆ ನಾನು ಅಂತಹ 10 ದೋಣಿಗಳನ್ನು ನಿರ್ಮಿಸಿದ್ದೇನೆ ಎಂದು ಹೇಳಿಕೊಂಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್‌ಸ್ಟಾಗ್ರಾಮ್‌ ನಲ್ಲಿ ಸುಮಾರು 32,000 ಅನುಯಾಯಿಗಳನ್ನು ಹೊಂದಿರುವ ಎಬೋ ನೋಹನ್ ತನ್ನ ಹೆಸರನ್ನು ‘ಎಬೋ ಜೀಸಸ್’ ಎಂದು ಘೋಷಿಸಿಕೊಂಡಿದ್ದಾನೆ. ಕಳೆದ ವರ್ಷ ಆಗಸ್ಟ್‌ನಲ್ಲಿ “ವಾಟ್ ವಿಲ್ ಹ್ಯಾಪನ್ ಅಂಡ್ ಹೌ ಇಟ್ ವಿಲ್ ಹ್ಯಾಪನ್” ಎಂಬ ಶೀರ್ಷಿಕೆಯ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದ, ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದ.

ಮತ್ತೊಂದು ವೀಡಿಯೊದಲ್ಲಿ, ಮೂರು ವಾರಗಳ ಉಪವಾಸದ ಮೂಲಕ ಅವನು ದೇವರಿಗೆ ವಿನಾಶವನ್ನು “ಮುಂದೂಡಲು” ಒತ್ತಾಯಿಸಿದ್ದಾಗಿ ಹೇಳಿಕೊಂಡಿದ್ದ. ನನ್ನ ಪ್ರಯತ್ನದಿಂದ ವಿನಾಶ ವಿಳಂಬವಾಗಿದೆ ಎಂದು ಹೇಳಿಕೊಂಡು ಅವನು ಜನರನ್ನು ಪಾರ್ಟಿಗೆ ಆಹ್ವಾನಿಸಿದ್ದ. ಈ ಎಲ್ಲಾ ಬೆಳವಣಿಗೆ ಬಳಿಕ ಆತನನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular