HomeLatest NewsBIG NEWS : 'UPSC' ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ...

BIG NEWS : ‘UPSC’ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸೂಚನೆ

ಬೆಂಗಳೂರು :   2025-26ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ UPSC ನಾಗರಿಕ ಸೇವೆಗಳ ಪರೀಕ್ಷಾ ಪೂರ್ವ ತರಬೇತಿಗೆ 2ನೇ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸೂಚನೆ ನೀಡಿದೆ.

2025-26ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಯು.ಪಿ.ಎಸ್.ಸಿ ನಾಗರಿಕ ಸೇವೆಗಳ ಪರೀಕ್ಷಾ ಪೂರ್ವ ತರಬೇತಿಯನ್ನು ಅರ್ಹ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶಿಷ್ಯವೇತನ, ಪ್ರಯಾಣ ಭತ್ಯೆ ಅಥವಾ ಇತರೆ ಯಾವುದೇ ರೀತಿಯ ಸೌಲಭ್ಯವನ್ನು ಒದಗಿಸಲಾಗುವುದಿಲ್ಲ. ತರಬೇತಿ ಪಡೆಯುವ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ನಿಗದಿತ ವಸತಿ ನಿಲಯದಲ್ಲಿಯೇ ಇದ್ದು, ಪರೀಕ್ಷಾ ಪೂರ್ವ ತರಬೇತಿಯನ್ನು ಪಡೆಯುವುದು.

ಸೂಚನೆಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಫಲಿತಾಂಶವನ್ನು  https://cetonline.karnataka.gov.in/kea/ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

* ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತಿದೆ:

.ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅವರು ಗಳಿಸಿರುವಅಂಕಗಳು, ಪ್ರವರ್ಗ, ಮೀಸಲಾತಿ, ಮತ್ತು ವಯೋಮಿತಿಯನ್ನು ಅನುಸರಿಸಿ ಮಾಡಲಾಗಿರುತ್ತದೆ.

* ಸದರಿ ಪರೀಕ್ಷಾ ಪೂರ್ವ ತರಬೇತಿಯ ಅವಧಿಯು ಅಂದಾಜು 10 ತಿಂಗಳುಗಳು ಆಗಿರುತ್ತದೆ. ಒಂದು ವೇಳೆ ತರಬೇತಿಯ ಅವಧಿಯನ್ನು ಇಲಾಖಾವತಿಯಿಂದ ವಿಸ್ತರಿಸಿದಲ್ಲಿ, ಅವಧಿಗೂ ಅಭ್ಯರ್ಥಿಗಳು ತರಬೇತಿಯನ್ನು ಕಡ್ಡಾಯವಾಗಿ ಪಡೆಯಬೇಕು.

* ಅಭ್ಯರ್ಥಿಗಳು ಸದರಿ UPSC ನಾಗರೀಕ ಸೇವೆ ಪರೀಕ್ಷಾ ಪೂರ್ವ ತರಬೇತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಪೂರ್ಣ ತರಬೇತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

* ಇಲಾಖೆಯಿಂದ ನೀಡುವ UPSC ನಾಗರೀಕ ಸೇವೆ ಪರೀಕ್ಷಾ ಪೂರ್ವ ತರಬೇತಿಯಲ್ಲಿ Kannada Literature, Public Administration, Anthropology, Geography, History ಯಾವುದಾದರೊಂದು ವಿಷಯವನ್ನು & Sociology ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ. ಇವುಗಳನ್ನು ಹೊರತುಪಡಿಸಿ, ಯಾವುದಾದರೂ ಅಭ್ಯರ್ಥಿಯು ಬೇರೆ ಐಚ್ಛಿಕ ವಿಷಯವನ್ನು ಅಧ್ಯಯನ ಮಾಡಲಿಚ್ಚಿಸಿದಲ್ಲಿ, ಆ ವಿಷಯವನ್ನು ಅಭ್ಯರ್ಥಿಯು ತಾನೇ ಖುದ್ದು ಅಧ್ಯಯನ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಯಾವುದೇ ಆರ್ಥಿಕ ಸಹಾಯವನ್ನು ನೀಡಲಾಗುವುದಿಲ್ಲ.

* ಅಭ್ಯರ್ಥಿಗಳು ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಯ ಪರೀಕ್ಷಾ ಪೂರ್ವ ತರಬೇತಿ ಪಡೆದಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ಯಾವುದೇ ರೀತಿಯ ಪರೀಕ್ಷಾ ಪೂರ್ವ ತರಬೇತಿಗೆ ಪುನಃ ಅರ್ಹರಿರುವುದಿಲ್ಲ.

* ಅಭ್ಯರ್ಥಿಯು ಒಮ್ಮೆ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ನಂತರ, ತರಬೇತಿಗೆ ಹಾಜರಾಗದಿದ್ದಲ್ಲಿ ಅಥವಾ ತರಬೇತಿಯನ್ನು ಮಧ್ಯದಲ್ಲಿ ಮೊಟಕುಗೊಳಿಸಿದಲ್ಲಿ ಅಂತಹ ಅಭ್ಯರ್ಥಿಯನ್ನು ಇಲಾಖೆಯಿಂದ ನೀಡುವ ಎಲ್ಲಾ ರೀತಿಯ ಪರೀಕ್ಷಾ ಪೂರ್ವ ತರಬೇತಿಗಳಿಂದ ಅನರ್ಹಗೊಳಿಸಿ, ಮುಂದೆ ಯಾವುದೇ ಅರ್ಜಿಯನ್ನೂ ಸಹ ಸಲ್ಲಿಸದಂತೆ ಬ್ಲಾಕ್ ಮಾಡಲಾಗುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular