ಹುಬ್ಬಳ್ಳಿ: ಹೊಸ ವರ್ಷದ ಸಂಭ್ರಮದ ಹೊತ್ತಲ್ಲೇ ಪತಿ ಮಹಾಶಯನೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಪತಿ ಮೆಹಬೂಬ್ ಪಣಿಬಂದ್ ತನ್ನ ಪತ್ನಿ ಅಂಜುಮಾ ಬಿಲೆಬಾಳ್ ಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಮೆಹಬೂಬ್ ಹಾಗೂ ಅಂಜುಮಾ ಇಬರಿಗೂ ಇದು ಎರಡನೇ ಮದುವೆಯಾಗಿತ್ತು. ಮೆಹಬೂಬ್ ಗೆ ಪತ್ನಿ ಅಂಜುಮಾ ಮೇಲೆ ಅನುಮಾನವಿತ್ತಂತೆ.
ಪತ್ನಿಗೆ ಅನೈತಿಕ ಸಂಬಂಧವಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿ ಬಂಧನಕ್ಕೆ ಬಲೆ ಬೀಸಿದ್ದಾರೆ.

