ಬೆಂಗಳೂರು : ಹೊಸ ವರ್ಷಾಚರಣೆ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
31.12.2025 ರಂದು ಸಂಜೆ 05.00 ಗಂಟೆಯಿಂದ ಮಧ್ಯರಾತ್ರಿ 02.00 ಗಂಟೆಯವರೆಗೆ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಕೋರಮಂಗಲದ ವೈ.ಡಿ ಮಠ ರಸ್ತೆಯಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವುದರಿಂದ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ಸಂಚಾರ ನಿರ್ಬಂಧ:
> ಹೊಸ ವರ್ಷಾಚರಣೆಯ ನಡೆಯುವ ಕೋರಮಂಗಲದ ವೈ.ಡಿ ಮಠರಸ್ತೆಯಲ್ಲಿ ಸುಖಸಾಗರ ಜಂಕ್ಷನ್ನಿಂದ ಮೈಕ್ರೋಲ್ಯಾಂಡ್ ಜಂಕ್ಷನ್ ವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
> ವೈ.ಡಿ ಮಠ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆಗಳಾದ ಜೆ.ಎನ್.ಸಿ ರಸ್ತೆ, 4ನೇ ಬಿ ಕ್ರಾಸ್ ರಸ್ತೆ, ಟಾನಿಕ್ ಹಿಂಭಾಗದರಸ್ತೆ, 17ನೇ ಹೆಚ್ ಮುಖ್ಯರಸ್ತೆಗಳಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
ಟ್ರಾಫಿಕ್ ಡೈವರ್ಷನ್ ಸ್ಥಳಗಳು:
> ಯುಕೋ ಬ್ಯಾಂಕ್ ಜಂಕ್ಷನ್
> ಚೌಡೇಶ್ವರಿ ದೇವಸ್ಥಾನದ ಜಂಕ್ಷನ್
> ಸುಖಸಾಗರ್ಜಂಕ್ಷನ್
ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
> ಆಡುಗೋಡಿ ಜಂಕ್ಷನ್ ಕಡೆಯಿಂದ ಯುಕೋ ಬ್ಯಾಂಕ್ ಜಂಕ್ಷನ್ ಮುಖಾಂತರ ಎನ್.ಜಿ.ವಿ ಜಂಕ್ಷನ್, ಸೋನಿವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಯುಕೋಬ್ಯಾಂಕ್ ಜಂಕ್ಷನ್ನಲ್ಲಿ ಎಡ ತಿರುವು ಪಡೆಯದೇ ಮಡಿವಾಳ ಚೆಕ್ಪೋಸ್ಟ್ ಕಡೆಗೆ ಸಾಗಿ ವಾಟರ್ಟ್ಯಾಂಕ್ ಜಂಕ್ಷನ್ ಮುಖಾಂತರ ಸೋನಿವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಸಾಗುವುದು.
> ಮಡಿವಾಳ ಕಡೆಯಿಂದ ಯುಕೋಬ್ಯಾಂಕ್ ಜಂಕ್ಷನ್ ಮುಖಾಂತರ ಎನ್.ಜಿ.ವಿ ಜಂಕ್ಷನ್, ಸೋನಿವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಯುಕೋಬ್ಯಾಂಕ ಜಂಕ್ಷನ್ಗೆ ಬರದೇ, ಐಯ್ಯಪ್ಪ ಜಂಕ್ಷನ್, ವಾಟರ್ ಜಂಕ್ಷನ್ ಮುಖಾಂತರ ಅಥವಾ ಮಡಿವಾಳ ಸಂತೇಬೀದಿ, ಕೃಪಾನಿಧಿ ಜಂಕ್ಷನ್, ಐಶ್ವರ್ಯ ಜಂಕ್ಷನ್, ವಿಪ್ರೋ ಜಂಕ್ಷನ್ ಮುಖಾಂತರ ಸೋನಿವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಸಾಗುವುದು.

