ಬೆಂಗಳೂರು: ಪೈರಸಿ ವಿರುದ್ಧ ನಟ ಜಗ್ಗೇಶ್ ಸಮರ ಸಾರಿದ್ದಾರೆ. ‘ಕೋಣ’ ಸಿನಿಮಾ ಪೈರಸಿ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಕೋಣ’ ಚಿತ್ರದ ನಿರ್ಮಾಪಕರ ಜೊತೆಗೆ ನಟ ಜಗ್ಗೇಶ್ ದೂರು ನೀಡಿದ್ದು, ಓರ್ವ ಪೈರಸಿ ಮಾಡುತ್ತಿದ್ದ ಓರ್ವನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಪೈರಸಿ ವಿರುದ್ಧ ಕನ್ನಡ ಚಿತ್ರರಂಗದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೈರಸಿ ತಡೆಗೆ ಹೋರಾಟ ನಡೆಸಲಾಗುತ್ತಿದೆ. ನಟ ಜಗ್ಗೇಶ್ ಅವರು ನಿರ್ಮಾಪಕರೊಂದಿಗೆ ಸೇರಿ ಪೈರಸಿ ಮಾಡುತ್ತಿದ್ದ ಓರ್ವನನ್ನು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ‘ಕೋಣ’ ಚಿತ್ರದ ರವಿಕಿರಣ್ ಅವರೊಂದಿಗೆ ವೈರಸಿ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಚಿತ್ರರಂಗವನ್ನು ಪೈರಸಿ ಕಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಜಾಲತಾಣಗಳಲ್ಲಿ ಮೂಲಕ ಮೊಬೈಲ್ ನಲ್ಲಿ ಸಿನಿಮಾ ನೋಡುತ್ತಿದ್ದಾರೆ. ಈ ರೀತಿ ಆದರೆ ನಿರ್ಮಾಪಕರನ್ನು ಕೊಲೆ ಮಾಡಿದಂತೆ, ದರೋಡೆ ಮಾಡಿದಂತೆ ಎಂದು ಜಗ್ಗೇಶ್ ಕಿಡಿ ಕಾರಿದ್ದಾರೆ. ‘ಕೋಣ’ ಚಿತ್ರವನ್ನು ಡೌನ್ಲೋಡ್ ಮಾಡುತ್ತಿದ್ದ ಯುವಕನನ್ನು ಹಿಡಿಯಲಾಗಿದ್ದು, ಆತ ಇದುವರೆಗೂ 100 ಸಿನಿಮಾಗಳನ್ನು ಈ ರೀತಿ ಪೈರಸಿ ಮಾಡಿದ್ದಾನೆ. ಲೊಕೇಶನ್ ಟ್ರೇಸ್ ಮಾಡಿದ ರವಿಕಿರಣ್ ಮತ್ತು ಜಗ್ಗೇಶ್ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಸಿನಿಮಾ ಡೌನ್ಲೋಡ್ ಮಾಡುವವರು, ಲಿಂಕ್ ಫಾರ್ವರ್ಡ್ ಮಾಡುವವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

