ಮೈಸೂರು: ಮೈಸೂರು ಜಿಲ್ಲೆಯ ಹುಣಸೂರಿನ ಸ್ಕೈ ಗೋಲ್ಡ್ ಆಂಡ್ ಡೈಮಂಡ್ ಅಂಗಡಿಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಚಿನ್ನದಂಗಡಿಯ ಮ್ಯಾನೇಜರ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಹುಣಸೂರು ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬರೋಬ್ಬರಿ 8 ಕೆಜಿ 34 ಗ್ರಾಂ 200ಮಿಲಿ ಚಿನ್ನಾಭರಣ ದರೋಡೆಯಾಗಿದೆ. ಅಂದಾಜು 10 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿಯಾಗಿದೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.
12 ಲಾಕೆಟ್, 8 ಬ್ರಾಸ್ ಲೆಟ್, 84 ಬಳೆಗಳು, 150 ನೆಕ್ಲೆಸ್ ಗಳು, 65 ಚೈನ್, 12 ಕಾಲು ಚೈನ್, 70 ಉಂಗುರ, 19 ಕರಿಮಣಿ ಸರ, 17 ಕಿವಿ ಡ್ರಾಪ್ಸ್ ಹಾಗೂ 13 ಡೈಮಂಡ್ ರಿಂಗ್ ಗಳು ದರೋಡೆಯಾಗಿವೆ.
ಒಟ್ಟು 18 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೀಸಿದ್ದಾರೆ.

