HomeIndiaBIG News: ಒಂದಾದ ಅಜಿತ್, ಶರದ್ ಪವಾರ್ ಮಹಾರಾಷ್ಟ್ರದಲ್ಲಿ ಸಂಚಲನ

BIG News: ಒಂದಾದ ಅಜಿತ್, ಶರದ್ ಪವಾರ್ ಮಹಾರಾಷ್ಟ್ರದಲ್ಲಿ ಸಂಚಲನ

ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಶಿವಸೇನೆ (ಯುಬಿಟಿ) ನಾಯಕ ಉದ್ಭವ್‌ ಠಾಕ್ರೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಸಂಸ್ಥಾಪಕ ರಾಜ್ ಠಾಕ್ರೆ ಕಳೆದ ವಾರ ಒಂದಾಗುವ ಮೂಲಕ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದರು. 20 ವರ್ಷಗಳ ಬಳಿಕ ಠಾಕ್ರೆಗಳು ಒಂದಾಗಿದ್ದು, ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.

ಈಗ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಶರದ್ ಪವಾರ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಪವಾರ್ ಪರಿವಾರ ಮತ್ತೆ ಒಂದಾಗಲಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ಉಂಟಾಗಿದೆ.

ಮಹಾರಾಷ್ಟ್ರ ರಾಜಕೀಯಲ್ಲಿ ಮಹಾಯತಿ ಮೈತ್ರಿಕೂಟದಲ್ಲಿ ಎನ್‌ಸಿಪಿ (ಅಜಿತ್ ಪವಾರ್ ಬಣ) ಇದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ)ಗಳಿವೆ. ಅಜಿತ್ ಪವಾರ್ ರಾಜ್ಯದ ಹಾಲಿ ಡಿಸಿಎಂ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎನ್‌ಸಿಪಿ (ಶರದ್ ಪವಾರ್ ಬಣ) ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿದೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಭವ್‌ ಠಾಕ್ರೆ ಬಣ) ಮುಂತಾದ ಪಕ್ಷಗಳಿವೆ. 2024ರ ವಿಧಾನಸಭೆ ಚುನಾವಣೆಯನ್ನು ಎನ್‌ಸಿಪಿಯ 2 ಬಣಗಳು ಪ್ರತ್ಯೇಕವಾಗಿ ಎದುರಿಸಿದ್ದವು.  

ಈಗ ಅಜಿತ್ ಪವಾರ್, ಶರದ್ ಪವಾರ್ ಒಂದಾಗುವ ಮೂಲಕ ಪವಾರ್ ಕುಟುಂಬ ಮಹಾರಾಷ್ಟ್ರ ರಾಜಕೀಯದಲ್ಲಿ ಕೈ ಜೋಡಿಸಿದಂತೆ ಆಗಿದೆ. ಅಜಿತ್ ಪವಾರ್ ಮಹಾರಾಷ್ಟ್ರಕ್ಕೆ, ಸುಪ್ರಿಯ ಸುಳೆ ರಾಷ್ಟ್ರಮಟ್ಟಕ್ಕೆ ಎಂಬ ಘೋಷಣೆಯೊಂದಿಗೆ ಪವಾರ್ ಕುಟುಂಬ ಕೈಜೋಡಿಸಿದೆ.

ಅಜಿತ್ ಪವಾರ್ ಘೋಷಣೆ ಏನು?: ಮುಂಬೈನಲ್ಲಿ ಮಾತನಾಡಿದ ಅಜಿತ್ ಪವಾರ್, “ಮುಂಬರುವ ಪಿಂಪ್ರಿ-ಚಿಂಚವಾಡ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ತಂದೆ ಸಮಾನರಾದ ಶರದ್ ಪವಾರ್ ನೇತೃತ್ವದ ಬಣದೊಂದಿಗೆ ತಮ್ಮ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು (ಎನ್‌ಸಿಪಿ) ಮೈತ್ರಿ ಮಾಡಿಕೊಳ್ಳಲಿದೆ” ಎಂದು ಘೋಷಣೆ ಮಾಡಿದರು. ಇದು ಪವಾರ್ ಕುಟುಂಬ ಮತ್ತೆ ಒಂದಾಗುವುದಕ್ಕೆ ಮೊದಲ ಹೆಜ್ಜೆಯಾಗಿದೆ.

ಪಿಂಪ್ರಿ-ಚಿಂಚವಾಡ್‌ ಚುನಾವಣೆಯಲ್ಲಿ ಅಜಿತ್ ಪವಾರ್, ಶರದ್ ಪವಾರ್ ಎರಡೂ ಬಣಗಳ ನಡುವಿನ ಒಗ್ಗಟ್ಟು ಪ್ರದರ್ಶನವಾಗಲಿದೆ. ಈ ಮೂಲಕ ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿರುವ ಎನ್‌ಸಿಪಿ (ಶರದ್ ಪವಾರ್) ಬಣ ಮಹಾಯತಿ ಮೈತ್ರಿಕೂಟದ ಪಕ್ಷದೊಂದಿಗೆ ಕೈ ಜೋಡಿಸಲಿದೆ.

ಜನವರಿ 15ರಂದು ಪಿಂಪ್ರಿ-ಚಿಂಚವಾಡ್‌ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಈ ಪ್ರದೇಶದಲ್ಲಿ ಪವಾರ್ ಕುಟುಂಬ ಪ್ರಭಾವಿಯಾಗಿದ್ದು, ಈಗ ಎರಡೂ ಬಣಗಳು ಒಂದಾಗಿ ಚುನಾವಣೆ ಎದುರಿಸಿದರೆ ಚುನಾವಣಾ ಚಿತ್ರಣವೇ ಬದಲಾಗಲಿದೆ.

ಎನ್‌ಸಿಪಿ ಎರಡೂ ಬಣಗಳು ಒಂದಾಗಲಿವೆ. “ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಾಗ, ಎರಡೂ ಬಣಗಳು ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿವೆ, ಇದು ಕುಟುಂಬವನ್ನು ಮತ್ತೆ ಒಂದುಗೂಡಿಸಿದೆ. ಇದರ ಫಲಿತಾಂಶದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸಿವೆ, ಆದರೆ ಕೆಲವೊಮ್ಮೆ ಮಹಾರಾಷ್ಟ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಅಜಿತ್ ಪವಾರ್ ಹೇಳಿದರು.

“ನಾನು ಸ್ಥಳೀಯ ನಾಯಕರೊಂದಿಗೆ ಸೀಟು ಹಂಚಿಕೆಯ ಬಗ್ಗೆಯೂ ಚರ್ಚಿಸಿದ್ದೇನೆ, ಅದನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಪುಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಕುರಿತ ಚರ್ಚೆಗಳು ನಡೆಯುತ್ತಿವೆ” ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಎರಡು ಬಣವಾಗಿದ್ದ ಎನ್‌ಸಿಪಿ: 1999ರಲ್ಲಿ ಕಾಂಗ್ರೆಸ್‌ ತೊರೆದ ಶರದ್ ಪವಾರ್ ಎನ್‌ಸಿಪಿ ಸ್ಥಾ‍ಪಿಸಿದ್ದರು. 2022ರಲ್ಲಿ ಅಜಿತ್ ಪವಾರ್ ಮತ್ತು ಇತರ ಶಾಸಕರು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಎನ್‌ಸಿಪಿ ಎರಡು ಭಾಗವಾಗಿ ವಿಭಜನೆಯಾಯಿತು. ಆಗ ಎನ್‌ಸಿಪಿ (ಅಜಿತ್ ಪವಾರ್ ಬಣ), (ಶರದ್ ಪವಾರ್ ಬಣ)ವಾಯಿತು. ಎರಡೂ ಪಕ್ಷಗಳು ಎರಡು ಮೈತ್ರಿಕೂಟ ಸೇರುವ ಮೂಲಕ ಪವಾರ್ ಕುಟುಂಬವೇ ಹೋಳಾಗಿತ್ತು.

1940ರ ಡಿಸೆಂಬರ್ 12ರಂದು ಜನಿಸಿದ ಶರದ್ ಪವಾರ್ ಕಾಂಗ್ರೆಸ್ ನಾಯಕ ಯಶವಂತರಾವ್ ಚಾವ್ಹಾಣ್ ಬೆಂಬಲದೊಂದಿಗೆ ರಾಜಕೀಯಕ್ಕೆ ಬಂದರು. 4 ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ರಕ್ಷಣಾ ಮತ್ತು ಕೃಷಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

1999ರಲ್ಲಿ ಕಾಂಗ್ರೆಸ್‌ ತೊರೆದ ಶರದ್ ಪವಾರ್ ಎನ್‌ಸಿಪಿ ಸ್ಥಾ‍ಪಿಸಿದ್ದರು. ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಸಂಸದರು. ಅವರು ರಾಷ್ಟ್ರ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಅಜಿತ್ ಪವಾರ್ ಬಿಜೆಪಿ ಜೊತೆ ಇರುವ ಕಾರಣಕ್ಕೆ ಅವರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular