HomeLatest Newsಕಾಂಗ್ರೆಸ್‌ನಿಂದ ಉದ್ಯೋಗ ಖಾತ್ರಿ ಯೋಜನೆ ಬಚಾವ್‌ ಆಂದೋಲನ, ಜ.5ಕ್ಕೆ ಚಾಲನೆ

ಕಾಂಗ್ರೆಸ್‌ನಿಂದ ಉದ್ಯೋಗ ಖಾತ್ರಿ ಯೋಜನೆ ಬಚಾವ್‌ ಆಂದೋಲನ, ಜ.5ಕ್ಕೆ ಚಾಲನೆ

ಕೇಂದ್ರ ಸರ್ಕಾರ ನರೇಗಾ ಯೋಜನೆ ಹೆಸರನ್ನು ಬದಲಾವಣೆ ಮಾಡಿದೆ. ‘ವಿಕಸಿತ ಭಾರತ: ಜಿ ರಾಮ್ ಜಿ ಕಾಯ್ದೆ’ಗೆ  ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಹೆಸರು ಬದಲಾವಣೆ ವಿರುದ್ಧ ದೇಶಾದ್ಯಂತ ಅಭಿಯಾನವನ್ನು ಆರಂಭಿಸಲಿದೆ.

ಶನಿವಾರ ದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು  ವಿಬಿ-ಜಿ  ರಾಮ್-ಜಿ ಎಂದು ಬದಲಾಯಿಸಲಾಗಿದ್ದು ಜನವರಿ 5ರಿಂದ ದೇಶಾದಾದ್ಯಂತ  ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನವನ್ನು  ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.

ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಡಿಸೆಂಬರ್ 21ರಂದು ‘ವಿಕಸಿತ ಭಾರತ: ಜಿ ರಾಮ್ ಜಿ’ (Viksit Bharat: G Ram G) ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಈ ಮೂಲಕ ಸದರಿ ವಿಧೇಯಕವು ಈಗ ಅಧಿಕೃತವಾಗಿ ಕಾನೂನಾಗಿ ಮಾರ್ಪಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಷ್ಟ್ರಪತಿಗಳ ಅನುಮೋದನೆಯ ಬೆನ್ನಲ್ಲೇ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ‘ವಿಕಸಿತ ಭಾರತ: ಜಿ ರಾಮ್ ಜಿ ಕಾಯ್ದೆ’ಯ ವಿವರಗಳನ್ನು ಮತ್ತು ಇದರ ಬಗ್ಗೆ ಹರಡಲಾಗುತ್ತಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು.

MGNREGA ಹೆಸರಿನಲ್ಲಿ ದೇಶವನ್ನು ಮತ್ತೊಮ್ಮೆ ದಾರಿ ತಪ್ಪಿಸಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಸಚಿವರು, ವಿಕಸಿತ ಭಾರತ: ಜಿ ರಾಮ್ ಜಿ ಯೋಜನೆಯು ನರೇಗಾ ಯೋಜನೆಗಿಂತ ಒಂದು ಪ್ರಗತಿಪರ ಮತ್ತು ಸುಧಾರಿತ ಹೆಜ್ಜೆಯಾಗಿದೆ ಎಂದರು.

ಈ ಹೊಸ ಕಾರ್ಯಕ್ರಮ ಹಿಂದಿನ 100 ದಿನಗಳ ಬದಲಾಗಿ ಈಗ 125 ದಿನಗಳ ಉದ್ಯೋಗದ ಕಾನೂನುಬದ್ಧ ಖಾತರಿಯನ್ನು ಖಚಿತಪಡಿಸುತ್ತದೆ. ಕೆಲಸ ಲಭ್ಯವಿಲ್ಲದ ಸಂದರ್ಭದಲ್ಲಿ ನೀಡಲಾಗುವ ನಿರುದ್ಯೋಗ ಭತ್ಯೆಯ ನಿಬಂಧನೆಯನ್ನು ಸಹ ಈಗ ಮತ್ತಷ್ಟು ಬಲಪಡಿಸಲಾಗಿದೆ. ಇದರ ಜೊತೆಗೆ, ಕೂಲಿ ಪಾವತಿಯಲ್ಲಿ ವಿಳಂಬವಾದರೆ ಈಗ ಹೆಚ್ಚುವರಿ ಪರಿಹಾರ ನೀಡುವ ನಿಯಮವನ್ನೂ ಸಹ ರೂಪಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಯೋಜನೆಯ ಅಡಿ ಪ್ರಸಕ್ತ ಸಾಲಿನಲ್ಲಿ ರೂ. 1,51,282 ಕೋಟಿಗೂ ಅಧಿಕ ಬೃಹತ್ ಮೊತ್ತವನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದು ಉದ್ಯೋಗ ಒದಗಿಸಲು ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿಯನ್ನು ಉತ್ತೇಜಿಸಲು ಸಮರ್ಪಕ ಹಣಕಾಸಿನ ಲಭ್ಯತೆಯನ್ನು ಖಚಿತಪಡಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

ಯೋಜನೆಯು ದೂರದೃಷ್ಟಿಯನ್ನು ಹೊಂದಿದೆ. ಇದರ ಅಡಿ ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಚಟುವಟಿಕೆಗಳು ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಈ ಕಾಮಗಾರಿಗಳು ಗ್ರಾಮೀಣ ಭಾಗದ ಚೇತೋಹಾರಿ ಶಕ್ತಿ ಮತ್ತು ಉತ್ಪಾದಕತೆಯನ್ನು ಬಲಪಡಿಸುವ ಜೊತೆಗೆ ಸುಸ್ಥಿರ ಆದಾಯದ ಮೂಲಗಳನ್ನು ಸೃಷ್ಟಿಸಲಿವೆ ಎಂದು ತಿಳಿಸಿದ್ದಾರೆ.

125 ದಿನಗಳ ಉದ್ಯೋಗ ಖಾತರಿಯೊಂದಿಗೆ, ಸಣ್ಣ ಮತ್ತು ಅತಿಸಣ್ಣ ರೈತರು ಕೃಷಿ ಹಂಗಾಮಿನ ಸಮಯದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸದಂತೆ ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ.

ಈ ಕಾನೂನು ಬಡವರ ಪರವಾಗಿ, ಪ್ರಗತಿಯ ಬೆಂಬಲವಾಗಿ ಮತ್ತು ಕಾರ್ಮಿಕರ ಉದ್ಯೋಗದ ಸಂಪೂರ್ಣ ಖಾತರಿಯ ಪರವಾಗಿ ದೃಢವಾಗಿ ನಿಂತಿದೆ. ವಿಕಸಿತ ಭಾರತದ ಅಡಿಪಾಯವಾಗಿ ವಿಕಸಿತ ಗ್ರಾಮಗಳನ್ನು ನಿರ್ಮಿಸುವ ಪ್ರತಿಜ್ಞೆಯನ್ನು ಇದು ಮುಂದುವರಿಸುತ್ತದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular