ಬೆಂಗಳೂರು: UGNEET-26: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಿಸಿದೆ.
MCC ಮತ್ತು KEA- ಎರಡೂ ಕಡೆ ಸೀಟು ಪಡೆದು, ಮೂರನೇ ಸುತ್ತಿನಲ್ಲಿ MCC ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅ.5 ರಂದು ಮಧ್ಯಾಹ್ನ 12 ಗಂಟೆಯೊಳಗೆ ವೆಬ್ ಸೈಟ್ ನ ಲಿಂಕ್ ನಲ್ಲಿ Choice-4 ಹಾಕಿ ಕೌನ್ಸೆಲಿಂಗ್ ನಿಂದ ಉಚಿತವಾಗಿ ಹೊರ ಹೋಗಬಹುದು.
ಈಗಾಗಲೇ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ MCC 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಅಲ್ಲಿ ಪ್ರವೇಶ ಪಡೆಯಲು ಇಚ್ಛೆ ಇದ್ದಲ್ಲಿ ಅ.5ರಂದು ಮಧ್ಯಾಹ್ನ 12 ಗಂಟೆಯೊಳಗೆ 10 ಸಾವಿರ ರೂಪಾಯಿ ದಂಡ ಕಟ್ಟಿ ರದ್ದುಪಡಿಸಿಕೊಳ್ಳಬಹುದು.
ಇತರ ರಾಜ್ಯಗಳಲ್ಲಿ 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಅಲ್ಲಿ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಥವಾ ಸಿಕ್ಕಿರುವ ಸೀಟು ಇಲ್ಲದೆ ಕೌನ್ಸೆಲಿಂಗ್ ನಿಂದ ಹೊರ ಹೋಗುವವರು KEA 3ನೇ ಸುತ್ತಿನ ಸೀಟನ್ನು 10 ಸಾವಿರ ರೂಪಾಯಿ ದಂಡ ಪಾವತಿಸಿ ರದ್ದುಪಡಿಸಿಕೊಳ್ಳಬಹುದು. ಇದಕ್ಕೂ ಅ. 5ರ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದೆ.
MCC ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳು, KEA 3ನೇ ಸುತ್ತಿನಲ್ಲಿ ಸೀಟು ಪಡೆದು, ಅಲ್ಲಿಯೇ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಂತಹವರು ಅ.5ರಂದು ಮಧ್ಯಾಹ್ನ 12 ಗಂಟೆಯೊಳಗೆ Confirmation of My KEA Seat ಎಂದು ವಿಷಯ ಬರೆದು ಇ-ಮೇಲ್ ( [email protected]) ಮಾಡಬೇಕು.
ಸೀಟು ರದ್ದುಪಡಿಸಿಕೊಂಡು ಕೌನ್ಸೆಲಿಂಗ್ ನಿಂದ ಹೊರ ಹೋದವರಿಗೆ ನಂತರದ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ರದ್ದುಪಡಿಸಿಕೊಂಡ ನಂತರ ಉಳಿದ ಸೀಟುಗಳನ್ನು ಪುನಃ ಇದೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಿ, ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಸುತ್ತಿನ ನಂತರ ಚಾಯ್ಸ್-4 ಆಯ್ಕೆಗೆ ಅವಕಾಶ ಇರುವುದಿಲ್ಲ.
ವಿವರಗಳಿಗೆ ವೆಬ್ ಸೈಟ್ ನೋಡುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಅಸಂಘಟಿತ ವಲಯದ ನಾಗರಿಕರಿಗಾಗಿ ‘ಎನ್ಪಿಎಸ್ ಸಂಚಯ’ ಪಿಂಚಣಿ ಯೋಜನೆ
ದಾವಣಗೆರೆ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಸಾರ್ವಜನಿಕರ ಹಾಗೂ ಅಸಂಘಟಿತ ವಲಯದ ನಾಗರಿಕರ ಆರ್ಥಿಕ ಭದ್ರತೆಗಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ‘ಎನ್ಪಿಎಸ್ ಸಂಚಯ’ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ತಿಳಿಸಿದರು .
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ‘NPS ದಿವಸ್–2026’ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘NPS ಸಂಚಯ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದರು.
ಇದು ಅಸಂಘಟಿತ ಮತ್ತು ಅನೌಪಚಾರಿಕ ವಲಯದ ನಾಗರಿಕರಿಗಾಗಿ ವಿಶೇಷವಾಗಿ ರೂಪಿಸಲಾದ ಸರಳ, ಸುರಕ್ಷಿತ ಮತ್ತು ಸುಸಂಘಟಿತ ಪಿಂಚಣಿ ಪರಿಹಾರವಾಗಿದೆ. ನಿಯಮಿತ ಉಳಿತಾಯದ ಮೂಲಕ ನಿವೃತ್ತಿ ಜೀವನಕ್ಕಾಗಿ ಉತ್ತಮ ಸಿದ್ಧತೆ ಮಾಡಿಕೊಳ್ಳಲು ಇದು ಅತ್ಯಂತ ಸಹಾಯಕವಾಗಿದೆ ಎಂದರು.
ರೈತರು, ಮಹಿಳೆಯರು, ಸಣ್ಣ ವ್ಯಾಪಾರಿಗಳು, ಅಸಂಘಟಿತ ವಲಯದ ಕಾರ್ಮಿಕರು 18 ರಿಂದ 85 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆಯು ಈ ಯೋಜನೆಯಲ್ಲಿ ಸೇರಬಹುದು. ಕೇವಲ ₹250 ಪಾವತಿಸಿ ಸುಲಭವಾಗಿ ಖಾತೆಯನ್ನು ತೆರೆಯಬಹುದು. ಖಾತೆ ತೆರೆದ ನಂತರ ಕನಿಷ್ಠ ₹10 ಗಳಷ್ಟೂ ಕೊಡುಗೆಯನ್ನು ನಿರಂತರವಾಗಿ ನೀಡಬಹುದು. ಚಂದಾದಾರರು ಪ್ರತ್ಯೇಕವಾಗಿ ಹೂಡಿಕೆ ಆಯ್ಕೆಯನ್ನು ಆರಿಸುವ ಅಗತ್ಯವಿರುವುದಿಲ್ಲ. ಈ ಹೂಡಿಕೆ ವಿನ್ಯಾಸವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೂಡಿಕೆದಾರರ ಮಾದರಿಯಲ್ಲೇ ಇರುತ್ತದೆ ಎಂದರು.
ಎನ್ಪಿಎಸ್ ಸಂಚಯಕ್ಕೆ ಸೇರಿದ 3 ವರ್ಷಗಳ ನಂತರ, ಗರಿಷ್ಠ 4 ಬಾರಿ ಸ್ವಂತ ಕೊಡುಗೆಯ ಶೇ. 25 ರಷ್ಟು ಹಣವನ್ನು ಭಾಗಶಃ ಹಿಂಪಡೆಯಲು ಅವಕಾಶವಿದೆ. 60 ವರ್ಷ ವಯಸ್ಸಾದಾಗ ಅಥವಾ ಖಾತೆ ತೆರೆದ 15 ವರ್ಷಗಳ ನಂತರ (ಯಾವುದು ಮೊದಲೋ ಆಗ), ಒಟ್ಟು ಸಂಚಿತ ನಿಧಿಯನ್ನು ಗಂಟುಮೊತ್ತವಾಗಿ ಅಥವಾ ಪಿಂಚಣಿ ರೂಪದಲ್ಲಿ ಸಂಪೂರ್ಣ ಹಿಂಪಡೆಯಲು ಅನುಮತಿ ನೀಡಲಾಗುತ್ತದೆ ಎಂದರು.
ನಿಯಮಿತವಾದ ಸಣ್ಣ ಉಳಿತಾಯವು ಕಾಲಕ್ರಮೇಣ ದೊಡ್ಡ ಪಿಂಚಣಿ ನಿಧಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಚಂದಾದಾರರಿಗೆ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಸ್ವಾವಲಂಬನೆ ಮತ್ತು ಸುರಕ್ಷತೆ ಒದಗಿಸುತ್ತದೆ. ಮುಂಚಿತವಾಗಿಯೇ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಚಕ್ರಬಡ್ಡಿ ಲಾಭದೊಂದಿಗೆ ನಿಧಿ ವೇಗವಾಗಿ ಬೆಳೆಯುತ್ತದೆ. ನಿವೃತ್ತಿ ಜೀವನದ ನಂತರವೂ ಖಚಿತ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಬಹುದು. ಎಂದರು.
eNPS ಅಧಿಕೃತ ಪೋರ್ಟಲ್ ಮೂಲಕ ಸುಲಭವಾಗಿ ಆನ್ಲೈನ್ನಲ್ಲಿ ಖಾತೆ ತೆರೆಯಬಹುದು. ಸಮೀಪದ ಬ್ಯಾಂಕ್ ಶಾಖೆಗಳು, ಸಿಎಸ್ಸಿ ಕೇಂದ್ರಗಳು ಅಥವಾ ಅಧಿಕೃತ ಸೇವಾ ಪೂರೈಕೆದಾರರ ಮೂಲಕವೂ ಖಾತೆ ತೆರೆಯಲು ಅವಕಾಶವಿದೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಟೋಲ್ ಫ್ರೀ ಸಂಖ್ಯೆ 1800 110 708, ಎಸ್ಎಂಎಸ್ (SMS) ಮೂಲಕ NPS Sanchay ಎಂದು ಟೈಪ್ ಮಾಡಿ 56677 ಗೆ ಕಳುಹಿಸಿ. ಅಥವಾ ಸಾಮಾಜಿಕ ಜಾಲತಾಣಗಳಾದ @nps_sanchay | @PFRDAOFFICIAL | @pfrda ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಸ್.ಹಿರೇಮಠ್, ಜಿಲ್ಲಾ ಕಾರ್ಮಿಕಾಧಿಕಾರಿ ಅರವಿಂದ್ ಎನ್.ಪಿ.ಎಸ್. ಸಂಚಯ್ ಸಿಬ್ಬಂದಿಗಳು ಹಾಜರಿದ್ದರು.

