ಕುಸುಮ್ – ಬಿ ಯೋಜನೆಯಿಂದ ರೈತರು ವಂಚಿತರಾಗಬಾರದು ಮತ್ತು ಮಾಹಿತಿ ಕೊರತೆ ನೀಗಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ನಾಗರಬಾವಿ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ.
ಯೋಜನೆಯ ಕಾಂಪೋನೆಂಟ್ ಬಿ ಅಡಿ ಸೋಲಾರ್ ಪಂಪ್ಸೆಟ್ ಹಾಕಿಸಿಕೊಳ್ಳುವ ಕುರಿತು ಮಾಹಿತಿ, ಆನ್ಲೈನ್ ಪಾವತಿ ಮತ್ತು ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ರೈತರು ಮಧ್ಯವರ್ತಿಗಳನ್ನು ಸಂಪರ್ಕಿಸದೆ 080 2220 2100 ಮತ್ತು 80951 32100 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

