ಬೆಂಗಳೂರು : ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ : ಮನೆಯಲ್ಲೇ ಕುಳಿತು ‘ಇ – ಖಾತಾ’ವನ್ನು ಜಸ್ಟ್ ಹೀಗೆ ಪಡೆದುಕೊಳ್ಳಿ. ಇ-ಖಾತಾ (e-Khata) ಎಂದರೆ ಕರ್ನಾಟಕದಲ್ಲಿ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ನೀಡಲಾಗುವ ಡಿಜಿಟಲ್ ಆಸ್ತಿ ನೋಂದಣಿ ದಾಖಲೆ ಪತ್ರವಾಗಿದ್ದು, ಆಸ್ತಿ ತೆರಿಗೆ ಪಾವತಿ ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಸುಲಭಗೊಳಿಸುತ್ತದೆ; ಇದನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಪಡೆಯಬಹುದು, ಮತ್ತು ಆಸ್ತಿ ಮಾರಾಟ, ಸಾಲ ಪಡೆಯಲು ಇದು ಅತ್ಯಗತ್ಯವಾಗಿದೆ.
ಬೇಕಾದ ದಾಖಲಾತಿಗಳು
- ಮಾಲೀಕರ ಭಾವಚಿತ್ರ ಮತ್ತು ಆಧಾರ್
- ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ್ ಸಂಖ್ಯೆ
- ಸ್ವತ್ತಿನ ಕ್ರಯ / ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುವುದು)
- ವಿದ್ಯುತ್ ಆರ್ ಆರ್ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)
- ಸ್ವತ್ತಿನ ಛಾಯಾಚಿತ್ರ
- EC: 15/16
- ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳು
ನಗರ ನಿವಾಸಿಗಳ 45 ಲಕ್ಷಕ್ಕೂ ಹೆಚ್ಚು ಕರಡು ಆಸ್ತಿ ದಾಖಲೆ ಇ-ಆಸ್ತಿ ತಂತ್ರಾಂಶದಲ್ಲಿ ಪ್ರಕಟಿಸಲಾಗುವುದು.
www.eaasthi.karnataka.gov.in
Online ನಲ್ಲಿ ಆಸ್ತಿ ದಾಖಲೆ ಪರಿಶೀಲಿಸಬಹುದು.
ಅಗತ್ಯವಿದ್ದಲ್ಲಿ ದಾಖಲೆ ನೀಡಿ ತಿದ್ದುಪಡಿ/ತಕರಾರು ಅರ್ಜಿ ಸಲ್ಲಿಸಬಹುದು.
ಆನ್ಲೈನ್ನಲ್ಲೇ ಶುಲ್ಕ ಪಾವತಿಸಿ ದಾಖಲೆ ಸಲ್ಲಿಸಿ
ಅನುಮೋದಿತ ಅಧಿಕೃತ ಇ-ಖಾತೆ ಪಡೆಯಬಹುದು.
K-1 ಕೇಂದ್ರಗಳಲ್ಲೂ ಸಹ ನಾಗರಿಕರು ತಂತ್ರಾಂಶವನ್ನು ಬಳಸಿ ಸೇವೆಯನ್ನು ಪಡೆಯಬಹುದು.
ಇ-ಖಾತಾ ಪಡೆಯುವ ಮೂಲಕ ಸರಳವಾಗಿ ಆಸ್ತಿ ತೆರಿಗೆಯನ್ನು ಆನ್ಲೈನ್ ಮುಖಾಂತರ ಪಾವತಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : www.eaasthi.karnataka.gov.in
7259585959

