HomeLatest NewsBIG NEWS : ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ : ಮನೆಯಲ್ಲೇ ಕುಳಿತು ಜಸ್ಟ್ ಹೀಗೆ...

BIG NEWS : ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ : ಮನೆಯಲ್ಲೇ ಕುಳಿತು ಜಸ್ಟ್ ಹೀಗೆ ಇ – ಖಾತಾ ಪಡೆದುಕೊಳ್ಳಿ.!

ಬೆಂಗಳೂರು : ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ : ಮನೆಯಲ್ಲೇ ಕುಳಿತು ‘ಇ – ಖಾತಾ’ವನ್ನು ಜಸ್ಟ್ ಹೀಗೆ ಪಡೆದುಕೊಳ್ಳಿ. ಇ-ಖಾತಾ (e-Khata) ಎಂದರೆ ಕರ್ನಾಟಕದಲ್ಲಿ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ನೀಡಲಾಗುವ ಡಿಜಿಟಲ್ ಆಸ್ತಿ ನೋಂದಣಿ ದಾಖಲೆ ಪತ್ರವಾಗಿದ್ದು, ಆಸ್ತಿ ತೆರಿಗೆ ಪಾವತಿ ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಸುಲಭಗೊಳಿಸುತ್ತದೆ; ಇದನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಪಡೆಯಬಹುದು, ಮತ್ತು ಆಸ್ತಿ ಮಾರಾಟ, ಸಾಲ ಪಡೆಯಲು ಇದು ಅತ್ಯಗತ್ಯವಾಗಿದೆ.

ಬೇಕಾದ ದಾಖಲಾತಿಗಳು

  1. ಮಾಲೀಕರ ಭಾವಚಿತ್ರ ಮತ್ತು ಆಧಾ‌ರ್
  2. ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ್ ಸಂಖ್ಯೆ
  3. ಸ್ವತ್ತಿನ ಕ್ರಯ / ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುವುದು)
  4. ವಿದ್ಯುತ್ ಆರ್ ಆರ್ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)
  5. ಸ್ವತ್ತಿನ ಛಾಯಾಚಿತ್ರ
  6. EC: 15/16
  7. ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳು
    ನಗರ ನಿವಾಸಿಗಳ 45 ಲಕ್ಷಕ್ಕೂ ಹೆಚ್ಚು ಕರಡು ಆಸ್ತಿ ದಾಖಲೆ ಇ-ಆಸ್ತಿ ತಂತ್ರಾಂಶದಲ್ಲಿ ಪ್ರಕಟಿಸಲಾಗುವುದು.
    www.eaasthi.karnataka.gov.in
    Online ನಲ್ಲಿ ಆಸ್ತಿ ದಾಖಲೆ ಪರಿಶೀಲಿಸಬಹುದು.
    ಅಗತ್ಯವಿದ್ದಲ್ಲಿ ದಾಖಲೆ ನೀಡಿ ತಿದ್ದುಪಡಿ/ತಕರಾರು ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಿ ದಾಖಲೆ ಸಲ್ಲಿಸಿ
ಅನುಮೋದಿತ ಅಧಿಕೃತ ಇ-ಖಾತೆ ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

K-1 ಕೇಂದ್ರಗಳಲ್ಲೂ ಸಹ ನಾಗರಿಕರು ತಂತ್ರಾಂಶವನ್ನು ಬಳಸಿ ಸೇವೆಯನ್ನು ಪಡೆಯಬಹುದು.
ಇ-ಖಾತಾ ಪಡೆಯುವ ಮೂಲಕ ಸರಳವಾಗಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮುಖಾಂತರ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : www.eaasthi.karnataka.gov.in
7259585959

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular