HomeLatest NewsGOOD NEWS : 'ಡಿಪ್ಲೊಮಾ ಇನ್ ಫಾರ್ಮಸಿ' ಪೂರ್ಣಗೊಳಿಸಿದ 1,000 ಅಭ್ಯರ್ಥಿಗಳನ್ನ ಅಪ್ರೆಂಟಿಸ್'ಗಳಾಗಿ ತೊಡಗಿಸಿಕೊಳ್ಳಲು ರಾಜ್ಯ...

GOOD NEWS : ‘ಡಿಪ್ಲೊಮಾ ಇನ್ ಫಾರ್ಮಸಿ’ ಪೂರ್ಣಗೊಳಿಸಿದ 1,000 ಅಭ್ಯರ್ಥಿಗಳನ್ನ ಅಪ್ರೆಂಟಿಸ್’ಗಳಾಗಿ ತೊಡಗಿಸಿಕೊಳ್ಳಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು :  ಕಳೆದ ಎರಡು ವರ್ಷಗಳಲ್ಲಿ ಫಾರ್ಮಸಿ ಡಿಪ್ಲೊಮಾ ಪದವಿ ಪಡೆದ ಸುಮಾರು 1,000 ಡಿಪ್ಲೊಮಾ ವಿದ್ಯಾರ್ಥಿಗಳನ್ನು ಮಂಜೂರಾದ ಖಾಲಿಯಿರುವ ಹುದ್ದೆಗಳ ಎದುರಾಗಿ ಪಾರದರ್ಶಕ ಆಯ್ಕೆ ವಿಧಾನದ ಮೂಲಕ 11 ತಿಂಗಳ ಅವಧಿಗೆ ನಿಗದಿತ ಮೊತ್ತದ ಸ್ಟೈಫಂಡ್ ಪಾವತಿಯ ಮೇಲೆ ಅಪ್ರೆಂಟಿಸ್‌ಗಳಾಗಿ ತೊಡಗಿಸಿಕೊಳ್ಳುವಂತೆ ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:ಆಇ 740 ವೆಚ್ಚ-5 2025 ದಿನಾಂಕ:16.09.2025ರಲ್ಲಿ ನೀಡಿರುವ ಸಹಮತಿ ಮೇರೆಗೆ ಮತ್ತು ಸಚಿವ ಸಂಪುಟ ಪ್ರಕರಣ ಸಂಖ್ಯೆ: ಸಿ-1018/2025, ದಿನಾಂಕ:04.12.2025ರಲ್ಲಿ ನೀಡಿರುವ ಅನುಮೋದನೆಯನ್ವಯ ಹೊರಡಿಸಲಾಗಿದೆ.

ಕರ್ನಾಟಕದಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಫಾರ್ಮಸಿ ಶಿಕ್ಷಣ ಮುಗಿಸಿ ಹೊರಬರುತ್ತಿದ್ದರೂ, ಪ್ರಾಯೋಗಿಕ ಅನುಭವದ ಕೊರತೆಯಿಂದ ಉದ್ಯೋಗ ಪಡೆಯಲು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

​ನಮ್ಮ ಹೊಸ ಯೋಜನೆಯಂತೆ, ಅಪ್ರೆಂಟಿಸ್‌ಗಳನ್ನು ನೇಮಕ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಡಿಪ್ಲೊಮಾ ಇನ್ ಫಾರ್ಮಸಿ (D.Pharma) ಪೂರ್ಣಗೊಳಿಸಿದ 1,000 ಅಭ್ಯರ್ಥಿಗಳನ್ನು ಅಪ್ರೆಂಟಿಸ್‌ಗಳಾಗಿ ತೊಡಗಿಸಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಅದರಂತೆ,

  • ​ಪರೀಕ್ಷಾ ಪ್ರಾಧಿಕಾರ ಮಂಡಳಿಯ ಮೂಲಕ ಅರ್ಹತೆಯ ಆಧಾರದ ಮೇಲೆ ಅತ್ಯಂತ ಪಾರದರ್ಶಕವಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
  • ಸರ್ಕಾರಿ ಕೋಟಾದಡಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ.
  • ​ಒಟ್ಟು 11 ತಿಂಗಳ ತರಬೇತಿ ಅವಧಿಯಲ್ಲಿ, ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಗದಿತ ಸ್ಟೈಫಂಡ್ ನೀಡಲಾಗುವುದು. ​
  • ಹಿರಿಯ ಫಾರ್ಮಸಿಸ್ಟ್‌ಗಳ ಮಾರ್ಗದರ್ಶನದಲ್ಲಿ ಔಷಧ ವಿತರಣೆ, ದಾಸ್ತಾನು ನಿರ್ವಹಣೆ ಕುರಿತಂತೆ ತರಬೇತಿ ನೀಡಲಾಗುವುದು‌

​ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಫಾರ್ಮಸಿಸ್ಟ್ ಹುದ್ದೆಗಳ ನಿರ್ವಹಣೆಗಾಗಿ ಅಪ್ರೆಂಟಿಸ್‌ಶಿಪ್‌ಗೆ ಬರುವವರನ್ನೇ ನಿಯೋಜಿಸುವ ಮೂಲಕ ಇಲಾಖೆಯ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಯುವಕರಿಗೆ ವೃತ್ತಿಪರ ನೈಪುಣ್ಯತೆ ಒದಗಿಸುವುದು ನಮ್ಮ ಗುರಿ. ​ಯುವ ಜನರ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular