ಬೆಂಗಳೂರು: ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ಪುಂಡರು ರಾದ್ಧಾಂತ ಮಾಡಿದ್ದಾರೆ. ಬೆಂಗಳೂರಿನಿಂದ ಗೋವಾಗೆ ಹೊರಟಿದ್ದ ರೈಲಿನಲ್ಲಿ ಪುಂಡಾಟಿಕೆ ಮೆರೆಯಲಾಗಿದೆ.
ಚೈನ್ ಎಳೆದಿರುವುದನ್ನು ಪ್ರಶ್ನೆ ಮಾಡಿದ್ದ ಆರ್.ಪಿ.ಎಫ್. ಸಿಬ್ಬಂದಿಯೊಂದಿಗೆ ಜಗಳವಾಡಿದ ಪುಂಡರು ಹಲ್ಲೆ ಮಾಡಿದ್ದಾರೆ, ಯಶವಂತಪುರ ರೈಲ್ವೆ ಠಾಣೆಗೆ ಆರ್.ಪಿ.ಎಫ್. ಸಿಬ್ಬಂದಿ ದೂರು ನೀಡಿದ್ದಾರೆ. ರೈಲು ತಡೆದು ಹಲ್ಲೆ ಆರೋಪದಡಿ ಮೂವರ ವಿರುದ್ಧ ದೂರು ದಾಖಲಾಗಿದೆ.
ಚೈನ್ ಎಳೆದಿದ್ದ ಮೂವರು ಪುಂಡರನ್ನು ಆರ್.ಪಿ.ಎಫ್. ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದು, ಯಶವಂತಪುರ ರೈಲ್ವೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸ್ವಲ್ಪ ಸಮಯ ವಿಳಂಬದ ನಂತರ ಬೆಂಗಳೂರಿನಿಂದ ಗೋವಾಗೆ ವಾಸ್ಕೋ ಡಿ ಗಾಮಾ ರೈಲು ತೆರಳಿದೆ.

