ಶಿವಮೊಗ್ಗ; ಚಿಟ್ ಫಂಡ್ ಸಿಬ್ಬಂದಿ ಕಿರುಕುಳಕ್ಕೆ ಮನನೊಂದು ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಲ್ಲಿನ ತೀರ್ಥಹಳ್ಳಿ ತಾಲೂಕಿನ ಹೊಸಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗರಾಜ್ (52) ಮೃತ ದುರ್ದೈವಿ. ಸಂಬಂಧಿಕರೊಬ್ಬರಿಗೆ ಚಿಟ್ ಫಂಡ್ ನಿಂದ ಸಾಲ ಕೊಡಿಸಿದ್ದರು. ಹೀಗೆ ಸಾಲ ಕೊಡಿಸುವಾಗ ತಮ್ಮ ಮನೆಯ ದಾಖಲೆ ಪತ್ರಗಳನ್ನು ಕೊಟ್ಟು ಸಾಲ ಕೊಡಿಸಿದ್ದರು. ಸಂಬಂಧಿ ಸಾಲ ಮರುಪಾವತಿ ಮಾಡದ ಕಾರಣಕ್ಕೆ ಚಿಟ್ ಫಂಡ್ ಸಿಬ್ಬಂದಿ ನಾಗರಾಜ್ ಅವರಿಗೆ ಕಿರುಕುಳ ನೀಡುತ್ತಿದ್ದರು.
ಇದರಿಂದ ಬೇಸತ್ತ ನಾಗರಾಜ್, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
