HomeLatest NewsBREAKING: ಕೊಹ್ಲಿ ಭರ್ಜರಿ ಶತಕ, ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ಬಗ್ಗುಬಡಿದ ಭಾರತ ಶುಭಾರಂಭ

BREAKING: ಕೊಹ್ಲಿ ಭರ್ಜರಿ ಶತಕ, ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ಬಗ್ಗುಬಡಿದ ಭಾರತ ಶುಭಾರಂಭ

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 17ರನ್ ಗಳಿಂದ ಭರ್ಜರಿ ಜಯಗಳಿಸಿದೆ. ವಿರಾಟ್ ಕೊಹ್ಲಿ ಅಮೋಘ ಶತಕ(135), ರೋಹಿತ್ ಶರ್ಮಾ  ಮತ್ತು ನಾಯಕ ಕೆ.ಎಲ್. ರಾಹುಲ್ ಅವರ ಅರ್ಧಶತಕಗಳ ನೆರವಿನಿಂದ ಏಕದಿನ ಸರಣಿಯ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿತು. ಭಾರತ ಪರವಾಗಿ ಯಶಸ್ವಿ ಜೈಸ್ವಾಲ್ 18, ರೋಹಿತ್ ಶರ್ಮಾ 57, ವಿರಾಟ್ ಕೊಹ್ಲಿ 135, ರಿತುರಾಜ್ ಗಾಯಕ್ವಾಡ್ 8, ವಾಷಿಂಗ್ಟನ್ ಸುಂದರ್ 13, ಕೆ.ಎಲ್. ರಾಹುಲ್ 60, ರವೀಂದ್ರ ಜಡೇಜ 32, ಹರ್ಷಿತ್ ರಾಣಾ ಅಜೇಯ 3 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಪರವಾಗಿ ಮಾರ್ಕೊ ಜೇನ್ಸನ್, ನಾದ್ರೆ ಬರ್ಗರ್, ಕಾರ್ಬಿನ್ ಬೋಷ್, ಓಟಿನೆಲ್ ಬ್ರಾಟ್ ಮ್ಯಾ ತಲಾ ಎರಡು ವಿಕೆಟ್ ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

350 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಪರ ಏಡನ್ ಮ್ಯಾಕ್ರಮ್ 7, ಮ್ಯಾಥ್ಯೂ ಬ್ರೀಟ್ಕೆ 72, ಟೋನಿ ಡಿ ಜೋರ್ಜಿ 39, ಡಿವಾಲ್ಡ್ ಬ್ರೇವಿಸ್ 37, ಮಾರ್ಕೋ ಜಾನ್ಸನ್ 70, ಕಾರ್ಬಿನ್ ಬೋಷ್ 67, ಪ್ರಿನೆಲಿಯನ್ ಸಬ್ರೆಯನ್ 17, ನಾದ್ರೆ ಬರ್ಗರ್ 17 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ 49.2 ಓವರ್ ಗಳಲ್ಲಿ 332 ರನ್ ಗೆ ಆಲ್ ಔಟ್ ಆಗಿದೆ.

ಭಾರತದ ಪರ ಅರ್ಶ್ ದೀಪ್ ಸಿಂಗ್ 2, ಹರ್ಷಿತ್ ರಾಣಾ 3, ಕುಲದೀಪ್ ಯಾದವ್ 4, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular