ಚಿಕ್ಕಮಗಳೂರು: ಮನೆ ಅಂಗಳದಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಚಿರತೆಯೊಂದು ಹೊತ್ತೊಯ್ದ ಭಯಾನಕ ಗಹ್ಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನವಿಲೇಕಲ್ ಗುಡ್ಡದಲ್ಲಿ ನಡೆದಿದೆ.
ತಂದೆ-ತಾಯಿಯ ಕಣ್ಣೆದುರೇ ಚಿರತೆ ಬಾಲಕಿ ಮೇಲೆ ದಾಳಿ ನಡೆಸಿ, ಬಾಲಕಿಯನ್ನು ಹೊತ್ತೊಯ್ದಿದೆ. ಬಾಲಕಿಯ ಶವ ಕಾಡಿನಲ್ಲಿ ಪತ್ತೆಯಾಗಿದೆ. ಸಾನ್ವಿ ಮೃತ ಬಾಲಕಿ.
ಮನೆಯ ಮುಂದೆಯೇ ಇದ್ದ ಮಗು ಚೀರಾಡಲಾರಂಭಿಸುತ್ತಿದ್ದಂತೆ ಪೋಷಕರು ಹೊರಗೋಡಿ ಬಂದಿದ್ದಾರೆ. ಅಷ್ಟರಲ್ಲಿ ಮಗುವನ್ನು ಚಿರತೆ ಹೊತ್ತೊಯ್ದಿದೆ. ಚಿರತೆ ಹಿಂಬಾಲಿ ಹೋದರು ಮಗು ಸಿಕ್ಕಿಲ್ಲ, ರಾತ್ರಿಯೆಲ್ಲ ಪೋಷಕರು, ಗ್ರಾಮಸ್ಥರು ಮಗುವಿಗಾಗಿ ಹುಡುಕಾಡಿದ್ದಾರೆ. ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
