ನವದೆಹಲಿ: 12 ಜನರ ಸಾವಿಗೆ ಕಾರಣವಾದ ದೆಹಲಿ ಸ್ಫೋಟದ ಹಿಂದಿನ ಶಂಕಿತ ಡಾ. ಉಮರ್ ನಬಿ ಮನೆ ಧ್ವಂಸ ಮಾಡಲಾಗಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ರಾತ್ರಿಯಿಡೀ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ 12 ಜನರು ಸಾವನ್ನಪ್ಪಿದ ದೆಹಲಿ ಕೆಂಪು ಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿರಬಹುದು ಎಂದು ಹೇಳಲಾದ ಡಾ. ಉಮರ್ ನಬಿಯವರ ಮನೆಯನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ.
ಮಾರಕ ಸ್ಫೋಟಕ್ಕೆ ಸಂಬಂಧಿಸಿದ ಜಾಲಗಳನ್ನು ಪತ್ತೆಹಚ್ಚಲು ಮತ್ತು ಕಿತ್ತುಹಾಕಲು ಈ ಕ್ರಮ ತೀವ್ರಗೊಂಡ ಪ್ರಯತ್ನಗಳ ಭಾಗವಾಗಿದೆ. ಬೆಳಗಿನ ಜಾವದಲ್ಲಿ ಧ್ವಂಸ ಕಾರ್ಯವನ್ನು ಕೈಗೊಂಡವು. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ತಿಳಿಸಿದ ಭದ್ರತಾ ಪಡೆಗಳು ತಿಳಿಸಿವೆ.
