ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎನ್ ಐಎ ಹಾಗೂ ಸ್ಥಳೀಯ ಪೊಲೀಸರು ನಾಲ್ಕು ಕಾರುಗಳನ್ನು ಬಳಸಿ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದನ್ನು ಬಯಲು ಮಾಡಿದ್ದಾರೆ.
ಉಗ್ರರು ಬಳಸಿದ್ದ ನಾಲ್ಕನೇ ಕಾರು ಇದೀಗ ಪತ್ತೆಯಾಗಿದೆ. ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಹುಂಡೈ ಐ20 ಕಾರು ಸ್ಫೋಟಿಸಿ ಉಗ್ರರು 13 ಜನರನ್ನು ಬಲಿ ಪಡೆದಿದ್ದರು. ಬಳಿಕ ಫರಿದಾಬಾದ್ ನಲ್ಲಿ ಇಕೋ ಸ್ಫೋರ್ಟ್ಸ್ ಕಾರು ಪತ್ತೆಯಾಗಿದೆ.
ಇದೀಗ ಅಲ್ ಫಹಾಲ್ ವಿವಿ ಬಳಿ ಬ್ರಿಜಾ ಕಾರು ಪತ್ತೆಯಾಗಿದೆ. ಒಟ್ಟು 32 ಕಾರುಗಳನ್ನು ದುಷ್ಕೃತ್ಯಕ್ಕೆ ಬಳಸಲು ಉಗ್ರರು ವ್ಯವಸ್ಥಿತ ಜಾಲ ಹೆಣೆದಿದ್ದರು. ಅವುಗಳಲ್ಲಿ ಒಟ್ಟು ನಾಲ್ಕು ಕಾರುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
