HomeLatest Newsನಟ ದರ್ಶನ್ ಗೆ ಹರಿದ ಕಂಬಳಿ ನೀಡಿರುವುದು ನಾಚಿಕೆಗೇಡು: ಆರೋಪಿಗಳಿಗೆ ಗುಣಮಟ್ಟದ ಹೊಸ ಕಂಬಳಿ, ಬಟ್ಟೆ...

ನಟ ದರ್ಶನ್ ಗೆ ಹರಿದ ಕಂಬಳಿ ನೀಡಿರುವುದು ನಾಚಿಕೆಗೇಡು: ಆರೋಪಿಗಳಿಗೆ ಗುಣಮಟ್ಟದ ಹೊಸ ಕಂಬಳಿ, ಬಟ್ಟೆ ನೀಡಲು ಕೋರ್ಟ್ ಸೂಚನೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಜೈಲಿನಲ್ಲಿ ಸೌಲಭ್ಯ ಒದಗಿಸುವ ವಿಚಾರದ ಕುರಿತಾಗಿ ಕೋರ್ಟ್ ಸೂಚನೆ ನೀಡಿದೆ. ದರ್ಶನ್ ಸೇರಿ ಇತರೆ ಆರೋಪಿಗಳಿಗೆ ಹರಿದ ಕಂಬಳಿ ನೀಡಿರುವುದು ನಾಚಿಕೆಗೇಡು ಎಂದು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಕ್ರಮಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಜನಸಾಮಾನ್ಯರ ಬಗ್ಗೆ ಅವರಿಗೆ ಸ್ವಲ್ಪ ಮಾನವೀಯತೆ ಇರಬೇಕು. ಚಳಿಯಿಂದ ರಕ್ಷಣೆಗೆ ಗುಣಮಟ್ಟದ ಹೊಸ ಕಂಬಳಿ, ಬಟ್ಟೆ ಒದಗಿಸಬೇಕು. ತಿಂಗಳಿಗೊಮ್ಮೆ ಕಂಬಳಿ ಮತ್ತು ಬಟ್ಟೆ ಶುಚಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಕೈದಿಗಳ ಭದ್ರತೆ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ. ಬೇರೆ ಬ್ಯಾರಕ್ ಗೆ ಸ್ಥಳಾಂತರ ಮಾಡುವಂತೆ ಆರೋಪಿಗಳು ಕೋರಿದ್ದಾರೆ. ಸಾಧ್ಯವಿದ್ದರೆ ಭದ್ರತೆ ಇರುವ ಬೇರೆ ಬ್ಯಾರಕ್ ಗೆ ಸ್ಥಳಾಂತರ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತಾಗಿ ಜೈಲು ಅಧೀಕ್ಷಕರಿಗೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಈರಪ್ಪಣ್ಣ ಪವಾಡಿನಾಯ್ಕ್ ಸೂಚನೆ ನೀಡಿದ್ದಾರೆ. ಉಳಿದ ವಿಚಾರಗಳ ಬಗ್ಗೆ ಜೈಲು ಅಧಿಕಾರಿಗಳ ವಿವರಣೆ ಸಮಾಧಾನಕರವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಶೀಘ್ರ ಸಾಕ್ಷ್ಯ ವಿಚಾರಣೆಗೆ ಕೋರಿದ್ದ ಅರ್ಜಿ ವಿಚಾರದ ಬಗ್ಗೆ ದೋಷಾರೋಪ ಹೊರಿಸಲು ಕೋರ್ಟ್ ನಿಂದ ವಿಳಂಬವಾಗಿಲ್ಲ. ಈ ಬಗ್ಗೆ ಮೆಮೊ ಸಲ್ಲಿಸುವ ಅಗತ್ಯವಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular