HomeLatest NewsBIG NEWS: ಗಣೇಶ ವಿಸರ್ಜನೆ ವೇಳೆ ಗಲಾಟೆ: ಪೊಲೀಸರಿಂದ ಲಾಠಿಚಾರ್ಜ್

BIG NEWS: ಗಣೇಶ ವಿಸರ್ಜನೆ ವೇಳೆ ಗಲಾಟೆ: ಪೊಲೀಸರಿಂದ ಲಾಠಿಚಾರ್ಜ್

ಧಾರವಾಡ: ಎರಡು ಓಣಿಗಳ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ನಡೆದ ಶೋಭಾಯಾತ್ರೆ ಸಂದರ್ಭದಲ್ಲಿ ಡಿ.ಜೆ. ಸಂಗೀತ ಕಾರ್ಯಕ್ರಮದ ವಿಚಾರವಾಗಿ ಯುವಕರು ಗಲಾಟೆ ಮಾಡಿದ್ದು, ಪೊಲೀಸರು ಲಾಠಿ ಬೀಸಿರುವ ಘಟನೆ ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದಿದೆ.

ಪೊಲೀಸರು ಲಾಠಿ ಪ್ರಹಾರ ಮಾಡುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಎರಡೂ ಮೆರವಣಿಗೆಗಳು ಗ್ರಾಮದ ವೃತ್ತದ ಬಳಿ ಬಂದಾಗ ಯುವಕರು ಡಿ.ಜೆ.ಸಂಗೀತ ವಿಚಾರವಾಗಿ ಸ್ಪರ್ಧೆಗಿಳಿದಿದ್ದಾರೆ. ಯುವಕರ ಗುಂಪಿನ ನಡುವೆ ವಾಗ್ವಾದ ನಡೆದು ಗಲಾಟೆ ನಡೆದಿದೆ. ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಜನರನ್ನು ಚದುರಿಸಿದ ಬಳಿಕ ಎರಡೂ ಗಣೇಶ ಮೂರ್ತಿಗಳನ್ನು ವ್ಯವಸ್ಥಿತವಾಗಿ ವಿಸರ್ಜನೆ ಮಾಡಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular