HomeLatest NewsBREAKING : ಚಿಕ್ಕಮಗಳೂರಿನಲ್ಲಿ ತಾಯಿಯ‍ನ್ನೇ ಬರ್ಬರವಾಗಿ ಹತ್ಯೆಗೈದ ಕೇಸ್’ಗೆ ಬಿಗ್ ಟ್ವಿಸ್ಟ್ : ಆರೋಪಿ ಪುತ್ರ...

BREAKING : ಚಿಕ್ಕಮಗಳೂರಿನಲ್ಲಿ ತಾಯಿಯ‍ನ್ನೇ ಬರ್ಬರವಾಗಿ ಹತ್ಯೆಗೈದ ಕೇಸ್’ಗೆ ಬಿಗ್ ಟ್ವಿಸ್ಟ್ : ಆರೋಪಿ ಪುತ್ರ ಅರೆಸ್ಟ್.!

ಚಿಕ್ಕಮಗಳೂರು :  ಚಿಕ್ಕಮಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಹೆತ್ತ ಮಗನೇ ತಾಯಿಯನ್ನು ಬರ್ಬರವಾಗಿ ಕೊಂದು ಶವವನ್ನು ಅರ್ಧಂಬರ್ಧ ಸುಟ್ಟು ಶವದ ಪಕ್ಕದಲ್ಲಿ ಮಗ ಮಲಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ  ಅರೆನೂರಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆಲ್ದೂರು ಠಾಣೆ ಪೊಲೀಸರು ಹಂತಕ ಪವನ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.  ಕುಡಿಯಲು ಹಣ ನೀಡದಿದ್ದಕ್ಕೆ ಮದ್ಯದ ಅಮಲಿನಲ್ಲಿ ಕೊಂದಿರುವುದಾಗಿ ತಿಳಿದು ಬಂದಿದೆ. ಹಣದ ವಿಚಾರಕ್ಕೆ ತಾಯಿ ಜೊತೆ ಜಗಳ ಮಾಡಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಬಾರ್ ವೊಂದರಲ್ಲಿ ಈತ ಕೆಲಸ ಮಾಡುತ್ತಿದ್ದು, 2 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಗೆ ಬಂದಿದ್ದನು.

ಚಿಕ್ಕಮಗಳೂರು ತಾಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದೆ. ತಾಯಿ ಭವಾನಿ(55) ಅವರನ್ನು ಪುತ್ರ ಪವನ್ ಕೊಲೆ ಮಾಡಿದ್ದಾನೆ. ನಿರ್ಜನ ಪ್ರದೇಶದ ಒಂಟಿ ಮನೆಯಲ್ಲಿ ಘಟನೆ ನಡೆದಿದೆ. ಮಗ ಪವನ್ ತಾಯಿ ಹತ್ಯೆ ಮಾಡಿ ಮನೆ ಒಳಗೆ ತಾಯಿಯ ಶವ ಸುಟ್ಟು ಹಾಕಿದ್ದಾನೆ .ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಭೀಕರ ಘಟನೆಗೆ ಕಾಫಿನಾಡು ಬೆಚ್ಚಿಬಿದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular