HomeLatest Newsರಾಜ್ಯದ ಜನತೆಗೆ ಗುಡ್ ನ್ಯೂಸ್: ಇನ್ನು ಒಂದೇ ದಿನದಲ್ಲಿ ಡಿಜಿಟಲ್ ರೂಪದಲ್ಲಿ ಎ, ಬಿ ವರ್ಗದ...

ರಾಜ್ಯದ ಜನತೆಗೆ ಗುಡ್ ನ್ಯೂಸ್: ಇನ್ನು ಒಂದೇ ದಿನದಲ್ಲಿ ಡಿಜಿಟಲ್ ರೂಪದಲ್ಲಿ ಎ, ಬಿ ವರ್ಗದ ಭೂದಾಖಲೆ ಲಭ್ಯ

ಬೆಂಗಳೂರು: ಕೈಬರಹದಲ್ಲಿ ಭೂ ದಾಖಲೆ ನೀಡುವ ವ್ಯವಸ್ಥೆ ಬದಲಿಗೆ ಕಂದಾಯ ಇಲಾಖೆ ಡಿಜಿಟಲ್ ರೂಪದಲ್ಲಿಯೇ ಕಂದಾಯ ದಾಖಲೆ ನೀಡುವುದನ್ನು ಕಡ್ಡಾಯಗೊಳಿಸಿದೆ.

ಇನ್ನು ಮುಂದೆ ಎ ಮತ್ತು ಬಿ ವರ್ಗದ ಭೂದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು ಪ್ರತಿ ಅಥವಾ ಕೈಬರಹದ ಮೂಲಕ ನೀಡುವ ಬದಲು ಡಿಜಿಟಲ್ ರೂಪದಲ್ಲಿಯೇ ನೀಡಲಾಗುವುದು. ರಾಜ್ಯದ ಎಲ್ಲಾ 240 ತಹಶೀಲ್ದಾರ್ ಕಚೇರಿಗಳಲ್ಲಿ ಡಿಜಿಟಲ್ ದಾಖಲೆ ನೀಡುತ್ತಿದ್ದು, ಶೀಘ್ರವೇ ರಾಜ್ಯದ 700 ಅಟಲ್ ಜೀ ಜನಸ್ನೇಹಿ ಕೇಂದ್ರಗಳಿಗೂ ವಿಸ್ತರಿಸಲಾಗುವುದು.

ಅರ್ಜಿದಾರರು ಕೋರುವ ಭೂ ದಾಖಲೆ ಈಗಾಗಲೇ ಸ್ಕ್ಯಾನ್ ಆಗಿ ದೃಢೀಕರಣಗೊಂಡಿದ್ದರೆ ಒಂದೇ ದಿನದಲ್ಲಿ ಡಿಜಿಟಲ್ ದಾಖಲೆ ವಿತರಿಸಲಾಗುವುದು. ಸ್ಕ್ಯಾನಿಂಗ್ ಪ್ರಕ್ರಿಯೆ ಆಗದಿದ್ದರೆ ಏಳು ದಿನದೊಳಗೆ ಡಿಜಿಟಲ್ ದಾಖಲೆ ವಿತರಿಸಲಾಗುವುದು. ಯಾವುದೇ ಅಡಚಣೆ ವಿಳಂಬವಿಲ್ಲದೆ ಭೂ ದಾಖಲೆ ಪಡೆಯಲು ಅನುಕೂಲವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗಿದೆ. ಇದರಿಂದ ದಾಖಲೆಗಳು ಶಿಥಿಲವಾಗಿ ಹಾಳಾಗುವುದನ್ನು ತಡೆಯಬಹುದು. ಭೂ ದಾಖಲೆ ದೃಢೀಕೃತ ಪ್ರತಿಗಾಗಿ ಅನಗತ್ಯವಾಗಿ ಕಾಯಬೇಕಿಲ್ಲ. ದಾಖಲೆಗಳನ್ನು ತಿರುಚಲು ಅವಕಾಶ ಇರುವುದಿಲ್ಲ. ತಾವು ಇರುವಲ್ಲೇ ಭೂ ದಾಖಲೆ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಧಕ್ಕೆ ನಿಂತ ಹಳೆಯ ಬಗರ್ ಹುಕುಂ ಅರ್ಜಿ ವಿಲೇವಾರಿಗೂ ಅನುಕೂಲವಾಗಲಿದೆ. ಪಾರದರ್ಶಕವಾಗಿ ಕಾಲಮಿತಿಯೊಳಗೆ ಡಿಜಿಟಲ್ ಭೂದಾಖಲೆ ಲಭ್ಯವಾಗಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular