ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಡ್ಯಾಂ ಹೊಸ ದಾಖಲೆ ಬರೆದಿದ್ದು, 118.60 ಅಡಿ ನೀರು ಭರ್ತಿಯಾಗಿದೆ.
ಹೌದು, ಜೂನ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಆಣೆಕಟ್ಟು ಭರ್ತಿಯಾಗಿದೆ. ಡ್ಯಾಂನಲ್ಲಿ 118.60 ಅಡಿ ನೀರು ತುಂಬಿದೆ. ಜೂನ್ ತಿಂಗಳಿನಲ್ಲಿ ಇಷ್ಟು ಭರ್ತಿಯಾಗಿರುವುದು ಇದೇ ಮೊದಲು. ಇಷ್ಟು ವರ್ಷ ಜುಲೈ ಅಥವಾ ಆಗಸ್ಟ್ ನಲ್ಲಿ ಡ್ಯಾಂ ಭರ್ತಿಯಾಗುತ್ತಿತ್ತು, ಆದರೆ ಈ ಭಾರಿ ಈ ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆ 118.60 ಅಡಿ ನೀರು ಭರ್ತಿಯಾಗಿದೆ. ಡ್ಯಾಂಗೆ 8 ಟಿಎಂಸಿ ನೀರು ಬಂದರೆ ಡ್ಯಾಂ ಸಂಪೂರ್ಣ ಭರ್ತಿಯಾಗಲಿದೆ.

