ಬೆಂಗಳೂರು : ಬೆಂಗಳೂರಿನ ಹಳೇ ಚಂದಾಪುರ ರೈಲ್ವೇ ಬ್ರಿಡ್ಜ್ ಬಳಿ ಇತ್ತೀಚೆಗೆ 10 ವರ್ಷದ ಬಾಲಕಿಯ ಶವ ಸೂಟ್ ಕೇಸ್ ನಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಹಾರದಲ್ಲಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ನಗರದ ಅನೇಕಲ್ ಜಿಲ್ಲೆಯ ಹಳೇ ಚಂದಾಪುರ ರೈಲ್ವೇ ಬ್ರಿಡ್ಜ್ ಬಳಿ ಸೂಟ್ ಕೇಸ್ ಪತ್ತೆಯಾಗಿತ್ತು, , ಅದರಲ್ಲಿ 10 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು.
ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರು ಬಿಹಾರದಲ್ಲಿ 7 ಮಂದಿಯನ್ನು ಬಂಧಿಸಿ ಕರ್ನಾಟಕಕ್ಕೆ ಕರೆತರುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ವಿಭಾಗದ ಪೊಲೀಸರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಬಳಿಕವಷ್ಟೇ ನಿಖರ ಕಾರಣ ತಿಳಿದು ಬರಬೇಕಿದೆ.
You Might Also Like
TAGGED:ಸೂಟ್ ಕೇಸ್ ನಲ್ಲಿ ಬಾಲಕಿ ಶವ