HomeLatest NewsBIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ 'ಸಂವಿಧಾನ ಪೀಠಿಕೆ' ಓದುವುದು ಕಡ್ಡಾಯ...

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ‘ಸಂವಿಧಾನ ಪೀಠಿಕೆ’ ಓದುವುದು ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಭಾರತ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳು ಪ್ರತಿ ದಿನ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಓದಲು ಕ್ರಮವಹಿಸುವಂತೆ ಮತ್ತು ಭಾರತದ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸುವಂತೆ ಕ್ರಮವಹಿಸಲು ಈಗಾಗಲೇ ಉಲ್ಲೇಖ (1), (2) ರ ಸರ್ಕಾರದ ಆದೇಶದನ್ವಯ ಉಲ್ಲೇಖ (3) ರಂತೆ ಸುತ್ತೋಲೆಗಳನ್ನು ಈ ಕಛೇರಿಯಿಂದ ಹೊರಡಿಸಲಾಗಿದೆ.ಈ ಕೆಳಗಿನಂತೆ ಕ್ರಮವಹಿಸಲು ಸದರಿ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ:

  1. ಉಲ್ಲೇಖ 1 ಮತ್ತು 2 ರ ಆದೇಶಗಳಂತೆ ರಾಜ್ಯದ ಈ ಇಲಾಖೆಯ ಎಲ್ಲಾ ಅಧೀನ ಕಛೇರಿಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ಭಾರತ ಸಂವಿಧಾನ ಪೀಠಿಕೆಯ ಭಾವಚಿತ್ರವನ್ನು ಎದ್ದು ಕಾಣುವಂತೆ ಅನುಬಂಧದಲ್ಲಿ ನಮೂದಿಸಿರುವಂತೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರದರ್ಶಿಸುವುದು.
  2. ಭಾರತ ಸಂವಿಧಾನ ಪೀಠಿಕೆಯನ್ನು ಪ್ರತಿ ನಿತ್ಯ ವಿದ್ಯಾರ್ಥಿಗಳು ಶಾಲಾ ಪ್ರಾರ್ಥನ //Assembly ಸಮಯದಲ್ಲಿ ಕಡ್ಡಾಯವಾಗಿ ಓದಲು ಅಗತ್ಯ ಕ್ರಮವಹಿಸುವುದು. ಸರದಿಯಂತ ಪ್ರತಿ ದಿನ ಒಬ್ಬ ವಿದ್ಯಾರ್ಥಿ / ವಿದ್ಯಾರ್ಥಿನಿ ಇದರ ಮುಂದಾಳತ್ವವನ್ನು ವಹಿಸುವುದು ಹಾಗೂ ಉಳಿದವರು ಪುನರುಚ್ಚರಿಸುವುದು.
  3. ಭಾರತ ಸಂವಿಧಾನದ ಪೀಠಿಕೆ ಆಶಯಗಳನ್ನು ವಿದ್ಯಾರ್ಥಿಗಳು ಗ್ರಹಿಸಲು ಪೂರಕವಾದ ಅವಕಾಶಗಳನ್ನು ಶಾಲಾ ಕಲಿಕೆಯಲ್ಲಿ ಒದಗಿಸುವುದು. ಅದಕ್ಕಾಗಿ ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಅಂಶಗಳ ಮೇಲೆ ಧನಾತ್ಮಕ ಸಂವಾದ, ಚರ್ಚೆ, ಪ್ರಬಂಧ ರಚನೆ, ಚಿತ್ರಕಲಾ ಪ್ರದರ್ಶನ, ಹಾಡುಗಳು, ಮತ್ತಿತರೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಈ ಹಿನ್ನಲೆಯಲ್ಲಿ 2025-26ನೇ ಸಾಲಿನಲ್ಲಿಯೂ ಉಲ್ಲೇಖ (1), (2) ಮತ್ತು (3) ರಲ್ಲಿನ ಸುತ್ತೋಲೆಗಳಲ್ಲಿ ತಿಳಿಸಿರುವಂತೆ ಭಾರತ ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳು ಪ್ರತಿ ದಿನ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಓದಲು ಕ್ರಮವಹಿಸುವಂತೆ ಮತ್ತು ಭಾರತದ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸುವಂತೆ ಮತ್ತು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿದೆ.
For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular