HomeLatest NewsBREAKING : ಚೊಚ್ಚಲ 'IPL' ಟ್ರೋಫಿ ಗೆದ್ದ 'RCB' : ರಾಜ್ಯ ಸರ್ಕಾರದಿಂದಲೇ ‘ವಿಕ್ಟರಿ...

BREAKING : ಚೊಚ್ಚಲ ‘IPL’ ಟ್ರೋಫಿ ಗೆದ್ದ ‘RCB’ : ರಾಜ್ಯ ಸರ್ಕಾರದಿಂದಲೇ ‘ವಿಕ್ಟರಿ ಪರೇಡ್’ ನಡೆಸಲು ಚಿಂತನೆ.!

ಬೆಂಗಳೂರು : ‘ಐಪಿಎ’ಲ್ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ವಿಜಯದ ಯಾತ್ರೆ ನಡೆಸಲು ಸಜ್ಜಾಗಿದೆ.

ಹೌದು, ಇಂದು ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಕೊಹ್ಲಿ ಬಾಯ್ಸ್ ವಿಜಯ ಯಾತ್ರೆ ನಡೆಸಲಿದೆ. ಐಪಿಎ’ಲ್ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ವಿಕ್ಟರಿ ಪರೇಡ್ ನಡೆಸಲಿದೆ.ರಾಜ್ಯ ಸರ್ಕಾರದ ಕಡೆಯಿಂದಲೇ ‘ವಿಕ್ಟರಿ ಪರೇಡ್’ ನಡೆಸಲು ಚಿಂತನೆ ನಡೆಸಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಗೆದ್ದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈದಾನದಲ್ಲಿ ಭಾವುಕರಾದ ವಿರಾಟ್ ಕೊಹ್ಲಿ ಆನಂದಭಾಷ್ಪ ಸುರಿಸಿದ್ದಾರೆ. ಆರ್.ಸಿ.ಬಿ. ಐಪಿಎಲ್ ಚೊಚ್ಚಲ ಟೋಪಿಯನ್ನು ಎತ್ತಿ ಹಿಡಿದಿದ್ದು ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಮೈದಾನದಲ್ಲಿ ಆನಂದಭಾಷ್ಪ ಸುರಿಸಿದ್ದಾರೆ. 18 ವರ್ಷದ ಕಾಯುವುದಕ್ಕೆ ಅಂತ್ಯವಾದ ಹಿನ್ನೆಲೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಅಂತಿಮವಾಗಿ ಗೆರೆ ದಾಟಿದಾಗ ವಿರಾಟ್ ಕೊಹ್ಲಿ ಭಾವನಾತ್ಮಕ ಗೊಂದಲಕ್ಕೊಳಗಾಗಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular