HomeLatest NewsBIG NEWS : 'ರಾಜ್ಯ ಸರ್ಕಾರಿ' ನೌಕರರಿಗೆ ಗುಡ್ ನ್ಯೂಸ್ : ಆನ್'ಲೈನ್ ತರಬೇತಿ ಪೋರ್ಟಲ್,...

BIG NEWS : ‘ರಾಜ್ಯ ಸರ್ಕಾರಿ’ ನೌಕರರಿಗೆ ಗುಡ್ ನ್ಯೂಸ್ : ಆನ್’ಲೈನ್ ತರಬೇತಿ ಪೋರ್ಟಲ್, ಆರೋಗ್ಯ ಸಂಜೀವಿನಿ ಯೋಜನೆಗೆ ‘CM ಸಿದ್ದರಾಮಯ್ಯ’ ಚಾಲನೆ

ಬೆಂಗಳೂರು : ರಾಜ್ಯ ಸರ್ಕಾರದ ತರಬೇತಿ ನೀತಿ 1997 ರಂತೆ, ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಜಿಲ್ಲಾ ತರಬೇತಿ ಕೇಂದ್ರಗಳು ಮತ್ತು ಸಚಿವಾಲಯ ತರಬೇತಿ ಸಂಸ್ಥೆಯ ಮೂಲಕ ಸಿಬ್ಬಂದಿಗೆ ಸಾಮಥ್ರ್ಯಾಭಿವೃದ್ಧಿ ತರಬೇತಿಯನ್ನು ನೀಡುವ ಮಹತ್ವದ ಹೆಜ್ಜೆ ಕೈಗೊಳ್ಳಲಾಗಿದೆ.

ಇನ್ನು ಮುಂದೆ ತರಬೇತಿ ಕೇವಲ ಭೌತಿಕವಾಗಿ ಅಲ್ಲದೆ, I-GoT ವೇದಿಕೆಯ ಸಹಭಾಗಿತ್ವದಲ್ಲಿ https://atimysore.karnataka.gov.in ಪೋರ್ಟಲ್ ಮೂಲಕ ಆನ್ಲೈನ್ನಲ್ಲಿಯೂ ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.

ಪ್ರಸ್ತುತ 4,55,746 ಸರ್ಕಾರಿ ನೌಕರರು ಈ ವೇದಿಕೆಯಲ್ಲಿ ನೋಂದಣಿ ಮಾಡಿರುತ್ತಾರೆ. ಸರ್ಕಾರಿ ನೌಕರರು ಅವರ ಎಚ್ಆರ್ಎಮ್ಎಸ್ (HRMS) ಮೊಬೈಲ್ ಸಂಖ್ಯೆಯ ಮೂಲಕ I-GoT ವೇದಿಕೆಯಲ್ಲಿ ಲಾಗಿನ್ ಆಗಿ ತರಬೇತಿ ಪಡೆಯಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದುದರಿಂದ, ಕೆಲಸದ ಹೊರೆ ಅಥವಾ ಸಿಬ್ಬಂದಿ ಕೊರತೆಯಿಂದಾಗಿ ವೈಯಕ್ತಿಕವಾಗಿ ತರಬೇತಿಗಳಿಗೆ ಹಾಜರಾಗಲು ಸಾಧ್ಯವಾಗದ ಸರ್ಕಾರಿ ನೌಕರರು ಈ ಸೌಲಭ್ಯವನ್ನು ಪಡೆಯಬಹುದು. ಸುಮಾರು ಹತ್ತು ತರಬೇತಿ ಮಾಡ್ಯೂಲ್ಗಳನ್ನು ಈಗಾಗಲೇ ಅಪ್ಲೋಡ್ ಮಾಡಲಾಗಿದೆ ಮತ್ತು ಇನ್ನೂ ಹಲವು ಮಾಡ್ಯೂಲ್ಗಳು ತಯಾರಿಕಾ ಪ್ರಕ್ರಿಯೆಯಲ್ಲಿವೆ. ಇದು ಕೇವಲ ಸಾಮಥ್ರ್ಯವರ್ಧನೆಯ ಅಲ್ಲ, ಸರ್ಕಾರದ ಕಾರ್ಯವೈಖರಿ ಹಾಗೂ ಜನತೆಗೆ ಒದಗಿಸಬಹುದಾದ ಸೇವೆಗಳ ಗುಣಮಟ್ಟವನ್ನು ಉತ್ತುಂಗಕ್ಕೆ ಎತ್ತುವ ದಿಕ್ಕಿನಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿವರ್ಗದವರು ಈ ಪೋರ್ಟಲ್ ನಲ್ಲಿ ನೋಂದಾಯಿಸಿ, ತಮಗೆ ಅಗತ್ಯವಾದ ತರಬೇತಿಗಳನ್ನು ಪಡೆಯುವುದರ ಮೂಲಕ ಸಮರ್ಥ ಹಾಗೂ ಜನಮೈತ್ರಿ ಆಡಳಿತಕ್ಕೆ ಪೂರಕವಾಗಿ ತಮ್ಮ ಪಾತ್ರವನ್ನು ನಿಭಾಯಿಸಬಹುದಾಗಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS): ಇಂದು ಬೆಂಗಳೂರಿನಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಂತೆ ಎಲ್ಲಾ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸಲು ರಾಜ್ಯ ಸರ್ಕಾರವು ರೂಪಿಸಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)ಗೆ ಮುಖ್ಯ ಮಂತ್ರಿಯವರಿಂದ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಈ ಯೋಜನೆಗೆ ಊಟ ವ್ಯವಸ್ಥೆಯಡಿ ಸರ್ಕಾರಿ ನೌಕರರ ನೋಂದಾವಣೆಯನ್ನು ಕೈಗೊಳ್ಳಲಾಯಿತು.

ಈ ಮಹತ್ವಾಕಾಂಕ್ಷಿ ಯೋಜನೆಯಡಿ ಸರ್ಕಾರದ ವಿವಿಧ ಇಲಾಖೆಗಳ 6 ಲಕ್ಷ ನೌಕರರು ಸೇರಿದಂತೆ ಅವರ ಕುಟುಂಬದ ಸದಸ್ಯರನ್ನು ಒಳಗೊಂಡಂತೆ ಅಂದಾಜು 25 ಲಕ್ಷ ಫಲಾನುಭವಿಗಳು ನಗದು ರಹಿತ ಆರೋಗ್ಯ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಯೋಜನೆಯಡಿ ಮೊದಲನೇ ಹಂತದಲ್ಲಿ ಸರ್ಕಾರಿ ನೌಕರರು ಅಂದಾಜು 2000 ಒಳರೋಗಿ ಚಿಕಿತ್ಸಾ ವಿಧಾನಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ನೋಂದಾಯಿತವಾದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಚಿಕಿತ್ಸೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular