HomeLatest NewsSHOCKING : ಹುಬ್ಬಳ್ಳಿ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಬೆಚ್ಚಿಬೀಳಿಸೋ ಘಟನೆ : ಮನೆ ಮುಂದೆ ಆಟವಾಡುತ್ತಿದ್ದ...

SHOCKING : ಹುಬ್ಬಳ್ಳಿ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಬೆಚ್ಚಿಬೀಳಿಸೋ ಘಟನೆ : ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಕಿಡ್ನ್ಯಾಪ್ ಗೆ ಯತ್ನ.!

ಬೀದರ್ : ಹುಬ್ಬಳ್ಳಿ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮನೆ ಮುಂದೆ ಗೇಟ್ ಬಳಿ ಆಟವಾಡುತ್ತಿದ್ದ ಬಾಲಕಿ ಕಿಡ್ನ್ಯಾಪ್ ಗೆ ಯತ್ನಿಸಲಾಗಿದೆ.

ಬೀದರ್ ನಲ್ಲಿ ಈ ಘಟನೆ ನಡೆದಿದೆ. ಬಾಲಕಿ ಕಿಡ್ನ್ಯಾಪ್ ಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೀದರ್ ನ ವಿದ್ಯಾನಗರ ಬಡಾವಣೆಯ 11 ನೇ ಕ್ರಾಸ್ ನಲ್ಲಿರುವ ಸತೀಶ ಬಕ್ಕಾಚೌಡೇಕರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ಯುವಕನೋರ್ವ ಮನೆ ಬಳಿ ಬೈಕ್ ನಿಲ್ಲಿಸಿ ನಿಂತಿದ್ದಾನೆ. ನಂತರ ಗೇಟ್ ಒಳಗೆ ಹೋಗಿ ಆಟವಾಡುತ್ತಿದ್ದ ಬಾಲಕಿ ಓರ್ವಳನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಪೋಷಕರು ಹೊರಬಂದಿದ್ದು, ಅಷ್ಟರಲ್ಲಿ ಯುವಕ ಬೈಕ್ ಓಡಿಸಿಕೊಂಡು ಹೋಗಿ ಎಸ್ಕೇಪ್ ಆಗಿದ್ದಾನೆ.ಸದ್ಯ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular