Shocking Video: ʼರೀಲ್ʼ ಹುಚ್ಚಿಗೆ ಜೀವವನ್ನೇ ಪಣಕ್ಕಿಟ್ಟ ಭೂಪ ; ರೈಲು ಬಂದರೂ ಹಳಿ ಬಿಡದ ಯುವಕ !

ಸಾಮಾಜಿಕ ಜಾಲತಾಣದಲ್ಲಿ ಒಂದೊಳ್ಳೆ ವೈರಲ್ ವಿಡಿಯೋ ಮಾಡಬೇಕೆಂಬ ಹುಚ್ಚಿಗೆ ಬಿದ್ದ ಯುವಕನೊಬ್ಬ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ರಂಜಿತ್ ಚೌರಾಸಿಯಾ ಎಂಬ ಯುವಕ ರೈಲು ಹಳಿಗಳ ಮೇಲೆ ಮಲಗಿ, ವೇಗವಾಗಿ ಬರುತ್ತಿದ್ದ ರೈಲು ತನ್ನ ಮೇಲೆ ಹಾದುಹೋಗುವಂತೆ ಮಾಡಿದ್ದಾನೆ. ಈ ಭಯಾನಕ ದೃಶ್ಯವನ್ನು ಆತನೇ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತನ ಈ ಅಪಾಯಕಾರಿ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳದಿ ಬಣ್ಣದ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ರಂಜಿತ್, ರೈಲು ಹಳಿಗಳ ಮಧ್ಯದಲ್ಲಿ ನೇರವಾಗಿ ಮಲಗಿದ್ದು, ಕೈಗಳನ್ನು ಮುಂದಕ್ಕೆ ಚಾಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ. ಸಂಪೂರ್ಣ ರೈಲು ತನ್ನ ಮೇಲೆ ಹಾದುಹೋಗುವವರೆಗೂ ಆತ ಅಲ್ಲೇ ಮಲಗಿದ್ದ ಎಂದು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ ಎಡಿಟ್ ಮಾಡಲಾಗಿದೆಯೇ ಎಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ರೈಲು ಬರುವ ಮುಂಚೆ ಮತ್ತು ರೈಲು ಹೋದ ನಂತರದ ದೃಶ್ಯಗಳಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಿ ಇದು ಎಡಿಟ್ ಮಾಡಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಏನೇ ಆಗಲಿ, ಈ ಅಪಾಯಕಾರಿ ಕೃತ್ಯಕ್ಕಾಗಿ ರಂಜಿತ್ ಚೌರಾಸಿಯಾನನ್ನು ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ. ಕಾನ್ಪುರ-ಲಕ್ನೋ ಮಾರ್ಗದಲ್ಲಿ ಕುಸುಂಬಿ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಮಾರ್ಟ್‌ಫೋನ್‌ನ ವಿಧಿವಿಜ್ಞಾನ ಪರೀಕ್ಷೆಯಿಂದ ವಿಡಿಯೋ ಎಡಿಟ್ ಮಾಡಲಾಗಿದೆಯೇ ಎಂಬುದು ತಿಳಿಯಲಿದೆ ಎಂದು ಜಿಆರ್‌ಪಿ ಅಧಿಕಾರಿ ಅರವಿಂದ್ ಪಾಂಡೆ ಹೇಳಿದ್ದಾರೆ. ರೀಲ್ ಮಾಡುವ ಹುಚ್ಚಿನಲ್ಲಿ ಯುವಕರು ತಮ್ಮ ಜೀವವನ್ನೇ ಪಣಕ್ಕಿಡುವುದು ಆತಂಕಕಾರಿ ವಿಷಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read