HomeCrimeಗ್ರಾಮದ ಬಳಿ ಬಸ್ ನಿಲ್ಲಿಸದಿದ್ದಕ್ಕೆ ಚಾಲಕನ ಬೆರಳು ಕತ್ತರಿಸಿದ ಯುವಕ | Shocking Video

ಗ್ರಾಮದ ಬಳಿ ಬಸ್ ನಿಲ್ಲಿಸದಿದ್ದಕ್ಕೆ ಚಾಲಕನ ಬೆರಳು ಕತ್ತರಿಸಿದ ಯುವಕ | Shocking Video

ರಾಜಸ್ಥಾನದ ಡೀಗ್‌ನ ದಿವಾಹಿ ಗ್ರಾಮದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಯುವಕನೊಬ್ಬ ಬಸ್ ಚಾಲಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ತನ್ನ ಗ್ರಾಮದ ಬಳಿ ಬಸ್ ನಿಲ್ಲಿಸದಿದ್ದಕ್ಕೆ ಆತನ ಬೆರಳನ್ನು ಕತ್ತರಿಸಿದ್ದಾನೆ.

ಈ ಘಟನೆಯಲ್ಲಿ ಆರೋಪಿ ಯುವಕನ ಜೊತೆ ಆತನ ಸಹಚರನೂ ಶಾಮೀಲಾಗಿದ್ದಾನೆ. ಟಿಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯ ಜಸಾನಾ ಗ್ರಾಮದ ಮುಂದೆ ಈ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ಎರಡು ಸಿಸಿ ಟಿವಿ ವಿಡಿಯೋಗಳು ಹೊರಬಂದಿದ್ದು, ಮೊದಲ ವಿಡಿಯೋದಲ್ಲಿ, ಯುವಕ ಜಗಳವಾಡುತ್ತಿರುವುದು ಕಂಡುಬಂದರೆ, ಎರಡನೇ ವಿಡಿಯೋದಲ್ಲಿ, ಯುವಕ ಮತ್ತು ಆತನ ಸಹಚರ ಕತ್ತಿಯನ್ನು ಹಿಡಿದುಕೊಂಡು ಬಸ್ ಚಾಲಕನನ್ನು ಹೊಡೆಯುತ್ತಿರುವುದು ಸೆರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಗೊಂಡ ಚಾಲಕನನ್ನು ಕೂಡಲೇ ಬಲ್ಲಭಗಢ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಆತನ ಸ್ಥಿತಿ ಗಂಭೀರವಾಗಿದ್ದರಿಂದ ಬಳಿಕ ಏಮ್ಸ್‌ಗೆ ಕಳುಹಿಸಲಾಯಿತು. ಈ ಘಟನೆಯಿಂದ ಆಕ್ರೋಶಗೊಂಡ ನಗರ ಬಸ್ ಚಾಲಕರು ಬುಧವಾರ ಬೆಳಿಗ್ಗೆ ಮುಷ್ಕರಕ್ಕೆ ಕರೆ ನೀಡಿದ್ದರು.

 

For Latest News Updates, Join Our Whatsapp Community🚩
RELATED ARTICLES

Most Popular