HomeEntertainmentBREAKING : ನಟ 'ಝೈದ್ ಖಾನ್' ನಟನೆಯ ‘ಕಲ್ಟ್’ ಚಿತ್ರದ ಶೂಟಿಂಗ್ ‘ಗೆ ರಾಜ್ಯ ಸರ್ಕಾರ...

BREAKING : ನಟ ‘ಝೈದ್ ಖಾನ್’ ನಟನೆಯ ‘ಕಲ್ಟ್’ ಚಿತ್ರದ ಶೂಟಿಂಗ್ ‘ಗೆ ರಾಜ್ಯ ಸರ್ಕಾರ ಬ್ರೇಕ್ : ಚಿತ್ರೀಕರಣ ಸ್ಥಗಿತ.!

ಹೊಸಪೇಟೆ : ‘ಕಲ್ಟ್’ ಚಿತ್ರದ ಶೂಟಿಂಗ್ ಗೆ ರಾಜ್ಯ ಸರ್ಕಾರದಿಂದ ಬ್ರೇಕ್ ಬಿದ್ದಿದ್ದು, ಈ ಹಿನ್ನೆಲೆ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆಯದೇ ಶೂಟಿಂಗ್ ಮಾಡಿರುವುದರಿಂದ ಕಲ್ಟ್’ ಚಿತ್ರದ ಶೂಟಿಂಗ್ ಗೆ ರಾಜ್ಯ ಸರ್ಕಾರ ಬ್ರೇಕ್ ಬಿದ್ದಿದ್ದು, ಈ ಹಿನ್ನೆಲೆ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ.

ಸಚಿವ ಜಮೀರ್ ಅಹಮದ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಚಿತ್ರದ ಶೂಟಿಂಗ್ ವೇಳೆ ತುಂಗಭದ್ರಾ ನದಿ ತೀರದಲ್ಲಿ ಬೆಂಕಿ ಚಿತ್ರೀಕರಣ ಮಾಡಲಾಗಿದೆ. ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆಯದೇ ಶೂಟಿಂಗ್ ಮಾಡಿದ್ದಕ್ಕೆ ಸದ್ಯ ಚಿತ್ರೀಕರಣಕ್ಕೆ ತಡೆ ನೀಡಲಾಗಿದೆ. ಈಗಾಗಲೇ ಹಂಪಿ ಸೇರಿ ಅನೇಕ ಕಡೆ ಚಿತ್ರದ ಶೂಟಿಂಗ್ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಂಪಿಯ ಸ್ನಾನಘಟ್ಟದ ವಿರುಪಾಪುರ ಗಡ್ಡಿ ಸಮೀಪದಲ್ಲಿ ನದಿ ತೀರದಲ್ಲಿ ಬೆಂಕಿ ಹಾಕಿ ಶೂಟಿಂಗ್ ನಡೆಸಲಾಗಿದೆ. ತುಂಗಭದ್ರಾ ನದಿ ತೀರದಲ್ಲಿ ಅಪರೂಪದ ನೀರುನಾಯಿಗಳು ಇರುತ್ತವೆ. ಹಾಗಾಗಿ ಇದನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಈಗ ಈ ಪ್ರದೇಶದಲ್ಲೇ ಚಿತ್ರ ತಂಡ ಬೆಂಕಿ ಹಾಕಿ ಶೂಟಿಂಗ್ ನಡೆಸಿದ್ದು, ಪರಿಸರ ಪ್ರೇಮಿಗಳು ಕಿಡಿಕಾರಿದ್ದರು. ಸದ್ಯ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರದ ಚಿತ್ರೀಕರಣಕ್ಕೆ ತಡೆ ನೀಡಲಾಗಿತ್ತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular