HomeIndiaವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಬಿಜೆಡಿ ಯೂ ಟರ್ನ್: ರಾಜ್ಯಸಭಾ ಸಂಸದರಿಗೆ ಯಾವುದೇ ವಿಪ್ ಜಾರಿ...

ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಬಿಜೆಡಿ ಯೂ ಟರ್ನ್: ರಾಜ್ಯಸಭಾ ಸಂಸದರಿಗೆ ಯಾವುದೇ ವಿಪ್ ಜಾರಿ ಇಲ್ಲ

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಬಿಜೆಡಿ ಪಕ್ಷವು ಯೂ-ಟರ್ನ್ ತೆಗೆದುಕೊಂಡಿದೆ. ರಾಜ್ಯಸಭಾ ಸಂಸದರಿಗೆ ಯಾವುದೇ ಪಕ್ಷದ ವಿಪ್ ಜಾರಿ ಮಾಡಿಲ್ಲ ಎಂದು ಹೇಳಿದೆ.

ಬಿಜು ಜನತಾದಳ(ಬಿಜೆಡಿ) ಸಂಸದ ಸಸ್ಮಿತ್ ಪಾತ್ರ, ನಮ್ಮ ಪಕ್ಷವು ಯಾವಾಗಲೂ ಜಾತ್ಯತೀತತೆ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ಎತ್ತಿಹಿಡಿದಿದೆ. ಎಲ್ಲಾ ಸಮುದಾಯಗಳ ಹಕ್ಕುಗಳನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅವರು, ವಕ್ಫ್ ಮಸೂದೆಯ ಬಗ್ಗೆ ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ವರ್ಗಗಳು ವ್ಯಕ್ತಪಡಿಸಿದ ವೈವಿಧ್ಯಮಯ ಭಾವನೆಗಳನ್ನು ನಾವು ಆಳವಾಗಿ ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಡಿ ನಂತರ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಯೂ ಟರ್ನ್ ತೆಗೆದುಕೊಂಡಿದ್ದು, ಇಂದು ರಾಜ್ಯಸಭೆಯಲ್ಲಿ ಪಕ್ಷದ ವಿಪ್ ಯಾವುದೇ ಇಲ್ಲ ಎಂದು ತನ್ನ ಸಂಸದರಿಗೆ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular