HomeKarnatakaBREAKING: ಹಣಕಾಸಿನ ವಿಚಾರದ ಗಲಾಟೆ ವೇಳೆ ಯುವಕನಿಗೆ ಚಾಕು ಇರಿತ

BREAKING: ಹಣಕಾಸಿನ ವಿಚಾರದ ಗಲಾಟೆ ವೇಳೆ ಯುವಕನಿಗೆ ಚಾಕು ಇರಿತ

ಕೋಲಾರ: ಹಣಕಾಸಿನ ವಿಚಾರವಾಗಿ ಗಲಾಟೆಯ ವೇಳೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಕೋಲಾರದ ಶಾರದಾ ಟಾಕೀಸ್ ಬಳಿ ನಡೆದಿದೆ.

ಕೋಲಾರದ ಭವಾನಿ ನಗರದ ಸುನಿಲ್ ಕುಮಾರ್ ಗೆ ಚಾಕುವಿನಿಂದ ಇರಿಯಲಾಗಿದೆ. ಸುಮನ್ ಗೆ ಚಾಕು ಇರಿಯಲು ಯತ್ನಿಸಿದ ವೇಳೆ ಸುನಿಲ್ ಅಡ್ಡ ಬಂದಿದ್ದಾನೆ. ಈ ವೇಳೆ ಚಾಕುವಿನಿಂದ ಇರಿಯಲಾಗಿದೆ. ಚಾಕು ಇರಿಯಲು ಬಂದಿದ್ದ ರಾಹುಲ್ ಮತ್ತು ಕೃಷ್ಣೋಜಿರಾವ್ ಅವರಿಗೂ ಗಾಯಗಳಾಗಿವೆ. ಗಲಾಟೆಯ ನಂತರ ಸ್ಥಳದಿಂದ ರಾಹುಲ್ ಮತ್ತು ಸುಮನ್ ಪರಾರಿಯಾಗಿದ್ದಾರೆ. ಗಾಯಗೊಂಡ ಸುನಿಲ್, ಕೃಷ್ಣೋಜಿರಾವ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular