
ಇನ್ಮುಂದೆ ಮದುವೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಕೆ ಮಾಡುವಂತಿಲ್ಲ. ಇಂತದ್ದೊಂದಿ ಮಹತ್ವದ ಆದೇಶವನ್ನು ಕೇರಳ ಹೈಕೋರ್ಟ್ ಹೊರಡಿಸಿದೆ.
ಮದುವೆ ಸಮರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಬಾರದು. ಸಣ್ಣ ಪ್ಲಾಸ್ಟಿಕ್ ಬಾಟಲ್ ಗಳು ಹಾನಿಕಾರಕವಾಗಿವೆ. ಮದುವೆ ಮಾತ್ರವಲ್ಲ ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಪ್ಲಾಸ್ಟಿಕ್ ಬಳಕೆ ಮಡಬಾರದು ಎಂದು ನ್ಯಾಯಾಲಯ ತಿಳಿಸಿದೆ.
ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಗಳನ್ನು ತೊಡೆದು ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪರಿಸರ ಸಂರಕ್ಷಣೆ ಕುರಿತ ಹಲವಾರು ಕ್ರಮಗಳ ಕುರಿತು ನ್ಯಾಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಗುಡ್ದಗಾಡು ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಬೇಕು. ನೂರಕ್ಕೂ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳ್ಲಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಪರವಾನಿಗೆ ಪಡೆಯಬೇಕು. ಮದುವೆ, ಆರತಕ್ಷತೆಗಳಲ್ಲಿ ಅರ್ಧ ಲೀಟರ್ ಪ್ಲಾಟಿಸ್ ಬಾಟಲ್ ಬಳಕೆ ನಿಷೇಧವಿದೆ. ಇನ್ನು ರೈಲ್ವೆ ಹಳಿಗಳ ಮೇಲೆ ಕಸ ಸುರಿಯುವುದನ್ನು ತಪ್ಪಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.