HomeLatest Newsಹಾಸನಾಂಬೆ ದರ್ಶನ ಪಡೆದ ನಟ ಶಿವಣ್ಣ, ರಿಷಬ್ ಶೆಟ್ಟಿ ದಂಪತಿ: ಇಂದು ರಾತ್ರಿ 8 ಗಂಟೆಗೆ...

ಹಾಸನಾಂಬೆ ದರ್ಶನ ಪಡೆದ ನಟ ಶಿವಣ್ಣ, ರಿಷಬ್ ಶೆಟ್ಟಿ ದಂಪತಿ: ಇಂದು ರಾತ್ರಿ 8 ಗಂಟೆಗೆ ದೇವಾಲಯದ ಗೇಟ್ ಬಂದ್

ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ ಭಾನುವಾರವೂ ಭಕ್ತ ಸಾಗರವೇ ಹರಿದು ಬಂದಿದೆ. ನಟರಾದ ಶಿವರಾಜ್ ಕುಮಾರ್ ಮತ್ತು ರಿಷಬ್ ಶೆಟ್ಟಿ ದಂಪತಿ ಇಂದು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್ ಸ್ಥಳದಲ್ಲಿ ಜನರನ್ನು ನಿಯಂತಿಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಮಾತನಾಡಿದರು. ಬಳಿಕ ದೇವಾಲಯಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.

ನಟ ರಿಷಬ್ ಶೆಟ್ಟಿ ಕುಟುಂಬ ಸಹಿತರಾಗಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ನಟರನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು ಉಂಟಾಗಿತ್ತು. ಅಭಿಮಾನಿಗಳು ನಟರೊಂದಿಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾನುವಾರದ ಅಪ್ಡೇಟ್

ಇಂದು ಭಕ್ತರಿಗೆ ಸುಗಮ ದರ್ಶನವಾಗಿದೆ. ನೈವೇದ್ಯ ಮತ್ತು ಪೂಜೆಗಾಗಿ ಮಧ್ಯಾಹ್ನ 2 ರಿಂದ 3:30 ರವರೆಗೆ ದೇವಿಯ ದರ್ಶನ ಇರುವುದಿಲ್ಲ.

Important:

ಇಂದು ರಾತ್ರಿ 8 ಗಂಟೆಗೆ ದೇವಾಲಯದ ಗೇಟ್‌ಗಳನ್ನು ಮುಚ್ಚಲಾಗುತ್ತದೆ. ಇಂದು ಮಧ್ಯರಾತ್ರಿ 12 ಗಂಟೆಗೆ ದರ್ಶನ ನಿಲ್ಲಲಿದೆ. ನಾಳೆ (ಸೋಮವಾರ) ಬೆಳಗ್ಗೆ 5 ಗಂಟೆಗೆ ದರ್ಶನ ಮತ್ತೆ ಆರಂಭವಾಗಲಿದೆ. ಈ ಬಾರಿ ದೀಪಾವಳಿಯ ಹಿಂದಿನ ರಾತ್ರಿ ವಿಶೇಷ ಪೂಜೆ ಇದೆ. ಇದು ದೇವಾಲಯದ ಕಡ್ಡಾಯ ಆಚರಣೆಯಾಗಿದ್ದು, ಭಕ್ತಾದಿಗಳು ಇಂದು (ಭಾನುವಾರ) ರಾತ್ರಿ 8 ಗಂಟೆಯ ನಂತರ ಬಂದರೆ ನಿಮ್ಮ ದರ್ಶನವು ನಾಳೆ ಬೆಳಿಗ್ಗೆ (ಸೋಮವಾರ) ಸಾಧ್ಯವಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

https://www.facebook.com/share/r/1BVrFvmSdr

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular