HomeKarnatakaBIG NEWS: ಹಕ್ಕಿ ಜ್ವರ ಕಂಡು ಬಂದ ಒಂದು ಕಿ.ಮೀ. ವ್ಯಾಪ್ತಿ ಎಲ್ಲಾ ಕೋಳಿಗಳ ಹತ್ಯೆಗೆ...

BIG NEWS: ಹಕ್ಕಿ ಜ್ವರ ಕಂಡು ಬಂದ ಒಂದು ಕಿ.ಮೀ. ವ್ಯಾಪ್ತಿ ಎಲ್ಲಾ ಕೋಳಿಗಳ ಹತ್ಯೆಗೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ಹಕ್ಕಿ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ರೋಗ ಪತ್ತೆಯಾದ ಸ್ಥಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿಗಳನ್ನು ಕೊಂದು ಹೂಳುವಂತೆ ತಿಳಿಸಲಾಗಿದೆ. ರಾಜ್ಯದ ಇತರೆಡೆ ಕೋಳಿ ಜ್ವರ ಹಬ್ಬಿದ್ದರೂ ಅಲ್ಲಿಯೂ ಇದೇ ಮಾರ್ಗಸೂಚಿ ಅನ್ವಯವಾಗುವ ಸಾಧ್ಯತೆ ಇದೆ.

ಕೋಳಿ ಫಾರಂ ಸುತ್ತಲಿನ 3 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ಪ್ರದೇಶವಾಗಿ ಗುರುತಿಸಬೇಕು. ಜ್ವರ ಪತ್ತೆಯಾದ ಒಂದು ಕಿಲೋಮೀಟರ್ ವ್ಯಾಪ್ತಿಯ ಕೋಳಿಗಳನ್ನು ಕೊಂದು ಮೊಟ್ಟೆಯ ಸಮೇತ ಹೂಳಬೇಕು. ಕಾರ್ಮಿಕರು ಪಿಪಿಇ ಡ್ರೆಸ್ ಧರಿಸಬೇಕು. 10 ಕಿ.ಮೀ.ನಲ್ಲಿ ಪೌಲ್ಟ್ರಿ, ಮೊಟ್ಟೆ ಅಂಗಡಿಗಳನ್ನು ಮುಚ್ಚಬೇಕು. ಕೋಳಿಗಳನ್ನು ಹನನ ಮಾಡಿದ ಕಾರ್ಮಿಕರು ನಂತರದ 10 ದಿನಗಳ ಕಾಲ ಐಸೋಲೇಟ್ ಆಗಿರಬೇಕು. ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular