HomeKarnatakaBIG NEWS : ರಾಜ್ಯದಲ್ಲಿ ಶಕ್ತಿ ಸಂಚಾರವನ್ನೇ ಸೃಷ್ಟಿಸಿದ ‘ಶಕ್ತಿ ಯೋಜನೆ’ : 400 ಕೋಟಿ...

BIG NEWS : ರಾಜ್ಯದಲ್ಲಿ ಶಕ್ತಿ ಸಂಚಾರವನ್ನೇ ಸೃಷ್ಟಿಸಿದ ‘ಶಕ್ತಿ ಯೋಜನೆ’ : 400 ಕೋಟಿ ಮಹಿಳೆಯರಿಂದ ಉಚಿತ ಪ್ರಯಾಣ.!

ಬೆಂಗಳೂರು : ಶಕ್ತಿ ಯೋಜನೆಯು ಕರುನಾಡಿನಲ್ಲಿ ಶಕ್ತಿ ಸಂಚಾರವನ್ನೇ ಸೃಷ್ಟಿಸಿದೆ, 400 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಶಕ್ತಿ ಯೋಜನೆಯು ಕರುನಾಡಿನಲ್ಲಿ ಶಕ್ತಿ ಸಂಚಾರವನ್ನೇ ಸೃಷ್ಟಿಸಿದೆ. ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಶಕ್ತಿ ತನ್ನ ಗುರಿಯನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುನ್ನಡೆಯುತ್ತಿರುವುದು ಯೋಜನೆಯ ಯಶಸ್ಸಿಗೆ ಹಿಡಿದಿರುವ ಕೈಗನ್ನಡಿ. ಶಕ್ತಿ ಯೋಜನೆ ಜಾರಿಗೊಂಡ ನಂತರದಿಂದ 400 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದು ಸ್ವಾವಲಂಬಿ ಬದುಕಿನೆಡೆಗೆ ಮುಂದಡಿಯಿಟ್ಟಿದ್ದಾರೆ. ಈವರೆಗಿನ ಒಟ್ಟು ಟಿಕೆಟ್ ಮೌಲ್ಯ ರೂ.9,803 ಕೋಟಿ ಆಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ನವ ಇತಿಹಾಸ ಸೃಷ್ಟಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular