ರಾಯಪುರ: ರಾಜ್ಯದಲ್ಲಿರುವ ಭೂ ರಹಿತ 5.62 ಲಕ್ಷ ಕೃಷಿ ಕಾರ್ಮಿಕರಿಗೆ ವಾರ್ಷಿಕ 10 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಘೋಷಿಸಿದ್ದಾರೆ.
ಛತ್ತೀಸಗಢದಲ್ಲಿ ಬೈಗಾಸ್ ಮತ್ತು ಗುನಿಯಾಸ್ ಎಂದು ಗುರುತಿಸುವ ಕೃಷಿ ಕಾರ್ಮಿಕರಿಗಾಗಿ ದೀನದಯಾಳ್ ಉಪಾಧ್ಯಾಯ ಭೂಮಿಹೀನ ಕೃಷಿ ಮಜದೂರ್ ಕಲ್ಯಾಣ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ಮೊದಲ ಹಂತವಾಗಿ ಫಲಾನುಭವಿಗಳಿಗೆ 562 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಕೃಷಿ ಕಾರ್ಮಿಕರಿಗೆ 10,000 ರೂ. ನೆರವಿನ ಈ ಯೋಜನೆ ಡಬಲ್ ಇಂಜಿನ್ ಸರ್ಕಾರದ ಕೊಡುಗೆಯಾಗಿದೆ. ಪ್ರಧಾನಿ ಮೋದಿಯವರು ಕೃಷಿಕರ ನೆರವಿನ ಸಂಕಲ್ಪ ಈಡೇರಿಸಿದ್ದು, ಕೃಷಿ ಭೂಮಿ ಇಲ್ಲದವರನ್ನು ಬಿಜೆಪಿ ಸರ್ಕಾರ ಕಡೆಗಣಿಸಿಲ್ಲ. ಅವರಿಗೆ ನೆರವು ನೀಡಿದೆ ಎಂದು ಹೇಳಿದ್ದಾರೆ.