HomeLatest Newsಥಿಯೇಟರ್’ಗೆ ಜನ ಬರದಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದುಕೊಂಡ ನಿರ್ದೇಶಕ : ವೀಡಿಯೋ ವೈರಲ್ |WATCH VIDEO

ಥಿಯೇಟರ್’ಗೆ ಜನ ಬರದಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದುಕೊಂಡ ನಿರ್ದೇಶಕ : ವೀಡಿಯೋ ವೈರಲ್ |WATCH VIDEO

ಸಿನಿಮಾ ಎಷ್ಟೇ ಚೆನ್ನಾಗಿ ಮಾಡಿದರೂ ಜನರು ಥಿಯೇಟರ್’ಗೆ ಬರಲ್ಲ. ಇದು ಸಿನಿಮಾ ನಿರ್ದೇಶಕರ ಗೋಳು.   ಥಿಯೇಟರ್ ಗೆ ಜನ ಬರದಿದ್ದಕ್ಕೆ ಬೇಸತ್ತ ನಿರ್ದೇಶಕರು ಚಪ್ಪಲಿಯಲ್ಲಿ ಹೊಡೆದುಕೊಂಡಿದ್ದಾರೆ.  ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ವಸಿಷ್ಟ ಸಿಂಹ ಹಾಗೂ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಬಾರ್ಬರಿಕ್ ಹೆಸರಿನ ತೆಲುಗು ಸಿನಿಮಾ ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆಗಿದೆ. ಈ ಕ್ರೈಂ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಕ ಮೋಹನ್ ಶ್ರೀವತ್ಸ ನಿರ್ದೇಶಿಸಿ ರಿಲೀಸ್ ಮಾಡಿದ್ದರು. ಸಿನಿಮಾಗೆ ಭರ್ಜರಿ ಪ್ರಚಾರ ಮಾಡಿದ್ದರು. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿಲ್ಲ. ಎಲ್ಲಾ ಥಿಯೇಟರ್ ಗಳು ಖಾಲಿ ಹೊಡೆಯುವುದ್ನು ನೋಡಿದ ನಿರ್ದೇಶಕರು ಸೋಶಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಮುಖಕ್ಕೆ ಚಪ್ಪಲಿಯಿಂದ ಹೊಡೆದುಕೊಂಡಿದ್ದಾರೆ.

ಸಿನಿಮಾ ಚೆನ್ನಾಗಿದ್ರೂ ಜನ ಯಾಕೆ ಬರ್ತಿಲ್ಲ..? ಕಾರಣ ಇಲ್ಲದೇ ಸಿನಿಮಾ ನೋಡಲು ಜನ ಬರದಿದ್ದರೆ ಸಿನಿಮಾ ಹೇಗಿದೆ ಎಂದು ನನಗೆ ಹೇಗೆ ಅರ್ಥವಾಗುತ್ತದೆ.  ಅದೇ ಬೇರೆ ಭಾಷೆಯ ಸಿನಿಮಾ ರಿಲೀಸ್ ಆದ್ರೆ ಮುಗಿಬಿದ್ದು ನೋಡುತ್ತೀರಿ ಎಂದು ಬೇಸರ ಹೊರಹಾಕಿದ್ದಾರೆ. ನನಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಸಹ ಅನಿಸುತ್ತಿದೆ. ನನ್ನ ಸಿನಿಮಾ ಜನರಿಗೆ ಇಷ್ಟ ಆಗದಿದ್ರೆ ಚಪ್ಪಲಿಯಲ್ಲಿ ಹೊಡೆದುಕೊಳ್ಳುತ್ತೇನೆ ಎಂದು ಹೇಳಿದ್ದೆ, ಈಗ ಹಾಗೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular