HomeEntertainmentರಿಲೀಸ್ ಆಯ್ತು ವಿರಾಟ್ ಅಭಿನಯದ 'ರಾಯಲ್' ಟ್ರೈಲರ್

ರಿಲೀಸ್ ಆಯ್ತು ವಿರಾಟ್ ಅಭಿನಯದ ‘ರಾಯಲ್’ ಟ್ರೈಲರ್

ದಿನಕರ್ ನಿರ್ದೇಶನದ ವಿರಾಟ್ ಅಭಿನಯದ ಬಹುನಿರೀಕ್ಷಿತ ‘ರಾಯಲ್’ ಚಿತ್ರ ಈಗಾಗಲೇ ತನ್ನ ಟೀಸರ್ ಹಾಗೂ ಹಾಡುಗಳಿಂದಲೇ ಸಾಕಷ್ಟು ನಿರೀಕ್ಷೆ  ಮೂಡಿಸಿದ್ದು, ಇದೇ ಜನವರಿ 24 ರಂದು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಬಿಡುಗಡೆ ದಿನಾಂಕ ಹತ್ತಿರವಿರುವ ಕಾರಣ ಚಿತ್ರ ತಂಡ ಇಂದು youtube ನಲ್ಲಿ ಇದರ  ಟ್ರೈಲರ್ ಬಿಡುಗಡೆ ಮಾಡಿದೆ.

ಈ  ಚಿತ್ರವನ್ನು ಜಯಣ್ಣ ಫಿಲಂಸ್ ಬ್ಯಾನರ್ ನಡಿ ಜಯಣ್ಣ- ಭೋಗೇಂದ್ರ ನಿರ್ಮಾಣ ಮಾಡಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಿರಾಟ್ ಸೇರಿದಂತೆ ಸಂಜನಾ ಆನಂದ್, ರಘು, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ರವಿ ಭಟ್ ಗೋಪಾಲ್ ದೇಶಪಾಂಡೆ, ಅಭಿಲಾಷ್ ತೆರೆ ಹಂಚಿಕೊಂಡಿದ್ದು, ಕೆ.ಎಂ.ಪ್ರಕಾಶ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ, ಸಂಕೇತ್ ಎಂವೈಎಸ್ ಛಾಯಾಗ್ರಹಣ, ಹಾಗೂ ಜಾನಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular