HomeEntertainment'ಗೇಮ್ ಚೇಂಜರ್' ಚಿತ್ರದ ಮೆಲೋಡಿ ಹಾಡು ರಿಲೀಸ್

‘ಗೇಮ್ ಚೇಂಜರ್’ ಚಿತ್ರದ ಮೆಲೋಡಿ ಹಾಡು ರಿಲೀಸ್

ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರ ಮುಂದಿನ ತಿಂಗಳು ಜನವರಿ 10ರಂದು ತೆರೆ ಕಾಣಲಿದ್ದು, ಇದರ ಮೂರನೇ ಹಾಡು ನಿನ್ನೆ youtube ನಲ್ಲಿ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದುಕೊಂಡಿದೆ.

”ನಾ ನಾ ಹೈರಾನಾ” ಎಂಬ ಈ ಮೆಲೋಡಿ ಹಾಡಿಗೆ ಕಾರ್ತಿಕ್, ಶ್ರೇಯಾ ಘೋಶಾಲ್ ಧ್ವನಿಯಾಗಿದ್ದು, ಥಮನ್ ಎಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಜಿ ಸ್ಟುಡಿಯೋಸ್ ಬ್ಯಾನರ್ ನಲ್ಲಿ ದಿಲ್ ರಾಜು ಮತ್ತು ಶಿರೀಶ್ ನಿರ್ಮಾಣ ಮಾಡಿದ್ದು, ರಾಮ್ ಚರಣ್ ಸೇರಿದಂತೆ ಕಿಯಾರಾ ಅಡ್ವಾಣಿ, ಅಂಜಲಿ, ಸಮುದ್ರಕನಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನಿಲ್ ಬಣ್ಣ ಹಚ್ಚಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಮಿರ್ ಮೊಹಮ್ಮದ್ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ಸಾಯಿ ಮಾಧವ್ ಬುರ್ರಾ ಸಂಭಾಷಣೆ, ಪ್ರಭುದೇವ, ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಹಾಗೂ ಎಸ್ ತಿರುನಾವುಕ್ಕರಸು ಅವರ ಛಾಯಾಗ್ರಾಹಣವಿದೆ. ಇನ್ನುಳಿದಂತೆ ಥಮನ್ ಎಸ್  ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular