HomeEntertainment'ಮೇಘ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಮೇಘ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಚರಣ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಮೇಘ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಇದರ ಲಿರಿಕಲ್ ಹಾಡೊಂದು ನಿನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

”ಯಾರೋ ಇವಳು ಸುಂದರಿ” ಎಂಬ ಈ ಹಾಡಿಗೆ ವಾಸುಕಿ ವೈಭವ್ ಧ್ವನಿಯಾಗಿದ್ದು, ಜೋಯಲ್ ಸಕಾರಿ ಮತ್ತು ಫ್ರಾಂಕ್ಲಿನ್ ರಾಕಿ ಅವರ ಸಂಗೀತವಿದೆ. ನಿರ್ದೇಶಕ ಚರಣ್ ಅವರ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಕಿರಣ್ ರಾಜ್ ಅವರಿಗೆ ಜೋಡಿಯಾಗಿ ಕಾಜಲ್ ಕುಂದಾರ್ ಅಭಿನಯಿಸಿದ್ದು, ರಾಜೇಶ್ ನಟರಂಗ, ಶೋಭರಾಜ್, ಸಂಗೀತ, ತರಂಗ ವಿಶ್ವ, ಶ್ರೀವಿದ್ಯಾ ಶಾಸ್ತ್ರಿ, ಹಂಸ ಪ್ರತಾಪ್, ನಾಗೇಂದ್ರ ಶಾ, ಸುಂದರ್ ವೀಣಾ, ಗಿರೀಶ್ ರಾಜಾಹುಲಿ, ನಾಗಮಂಗಲ ಜಯರಾಮ್, ಹನುಮಂತ ಗೌಡ, ಸೌರಬ್ ಕುಲಕರ್ಣಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೌತಮ್ ನಾಯಕ್ ಅವರ ಸಂಕಲನ ಹಾಗೂ ಛಾಯಾಗ್ರಾಹಣವಿದ್ದು, ವಿಕ್ರಮ್ ಮೋರ್, ನರಸಿಂಹ ಅವರ ಸಾಹಸ ನಿರ್ದೇಶನವಿದೆ. ಕೃಷಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಯತೀಶ್ ಎಚ್ ಆರ್ ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular