HomeKarnatakaBIG NEWS: ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ನಿರಾಸೆಯಾಗಿದೆ: ಅದರಲ್ಲೂ ಶಿಗ್ಗಾಂವಿ ಫಲಿತಾಂಶ ಆಘಾತ ತಂದಿದೆ: ಬಿ.ವೈ....

BIG NEWS: ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ನಿರಾಸೆಯಾಗಿದೆ: ಅದರಲ್ಲೂ ಶಿಗ್ಗಾಂವಿ ಫಲಿತಾಂಶ ಆಘಾತ ತಂದಿದೆ: ಬಿ.ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಹಿನ್ನಡೆಯಿಂದ ನಿರಾಸೆಯಾಗಿರುವುದು ನಿಜ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್ ಡಿಯೆ ಗೆಲುವು ಸಾಧಿಸಿರುವುದು ಖುಷಿಯ ವಿಚಾರ. ಕರ್ನಾಟಕದ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ನಿಜಕ್ಕೂ ನಿರಾಸೆಯಾಗಿದೆ ಎಂದರು.

ಸೋಲಿನ ಕಾರಣಗಳ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚೆ ಮಾಡುತ್ತೇವೆ. ಸಂಡೂರಿನಲ್ಲಿ ಬಿಜೆಪಿ ಮೊದಲ ಬಾರಿ 80 ಸಾವಿರ ಮತ ಪಡೆದಿದೆ. 8-10 ಸಾವಿರ ಅಂತರದಲ್ಲಿ ಗೆಲುವಿನ ನಿರೀಕ್ಷೆ ಇತ್ತು. ಸಂಡೂರು ಚುನಾವಣೆಯಲ್ಲಿ ಹಿನ್ನಡೆ ಎಂದು ನಾನು ಭಾವಿಸಲ್ಲ. ಹಿನ್ನಡೆಗೆ ಕಾರಣ ಹುಡುಕಿ ಸರಿಪಡಿಸಿಕೊಳ್ಳುತ್ತೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಶಿಗ್ಗಾಂವಿ ಕ್ಷೇತ್ರ ಮಾತ್ರ ನಮಗೆ ಆಘಾತ ತಂದಿದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೆಲಸ ಮಾಡಿದ್ದರು. ಅಭಿವೃದ್ಧಿ ಕೆಲಸಗಳಾಗಿವೆ. ಆದರೂ ಸೋಲಿಗೆ ಕಾರಣವೇನು? ಈ ಬಗ್ಗೆ ಚರ್ಚಿಸುತ್ತೇವೆ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular