HomeEntertainment29ನೇ ವಸಂತಕ್ಕೆ ಕಾಲಿಟ್ಟ ನಟಿ ಪ್ರಿಯಾಂಕ ಮೋಹನ್

29ನೇ ವಸಂತಕ್ಕೆ ಕಾಲಿಟ್ಟ ನಟಿ ಪ್ರಿಯಾಂಕ ಮೋಹನ್

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು  ಮೂಡಿಸಿರುವ   ಬೆಂಗಳೂರಿನ  ಬೆಡಗಿ ಪ್ರಿಯಾಂಕ ಮೋಹನ್ ಇಂದು ತಮ್ಮ 29ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

2019ರಲ್ಲಿ ತೆರೆಕಂಡ ಗಿರೀಶ್ ಜಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಒಳಗೊಂಡ ‘ಒಂದ್ ಕಥೆ ಹೇಳ್ಲಾ’  ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ  ಇವರು ಬಳಿಕ ಅದೇ ವರ್ಷದಲ್ಲಿ ‘ನಾನಿ’s ಗ್ಯಾಂಗ್ ಲೀಡರ್’  ಎಂಬ ತೆಲುಗು ಚಿತ್ರದಲ್ಲಿ ತೆರೆ ಹಂಚಿಕೊಂಡರು.

ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಇವರಿಗೆ ‘ಡಾಕ್ಟರ್’ ಎಂಬ ತಮಿಳು ಹಾಸ್ಯ ಚಲನಚಿತ್ರದಲ್ಲಿ  ಅಭಿನಯಿಸುವ ಅವಕಾಶ ಸಿಕ್ಕಿತು. ಇತ್ತೀಚಿಗಷ್ಟೇ ‘ಬ್ರದರ್’ ನಲ್ಲಿ  ಅಭಿನಯಿಸಿದ್ದ ಪ್ರಿಯಾಂಕ ಮೋಹನ್   ‘og’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ  ಹಲವಾರು ನಟ ನಟಿಯರು ಪ್ರಿಯಾಂಕ ಮೋಹನ್ ಅವರಿಗೆ ವಿಶ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular